ಮೈಸೂರು:
ಸಚಿವ ಸಂಪುಟ ರಚನೆ ವೇಳೆಯಲ್ಲಿ ಸರ್ಕಾರ ಘೋಷಿಸಿದ ಮೂವರು ಡಿಸಿಎಂಗಳ ಪೈಕಿ ಒಬ್ಬರಾದ ಲಕ್ಷ್ಮಣ ಸವದಿ ನಾನು ಡಿಇಎಂ ಆಗಲು ಎಂದೂ ಬಯಸಿರಲಿಲ್ಲ ಇದು ನನ್ನ ಪಾಲಿಗೆ ಬಯಸದೆ ಬಂದ ಭಾಗ್ಯ ಎಂದಿದ್ದಾರೆ. ಪಕ್ಷದ ವರಿಷ್ಠರು ಹಲವು ಬಾರಿ ಯೋಚಿಸಿ ದೂರ ದೃಷ್ಟಿಯಿಂದ ಅಧಿಕಾರ ನೀಡಿದ್ದಾರೆ. ಯಾವ ಕಾರಣದಿಂದ ಈ ಪದವಿ ಸಿಕ್ಕಿದೆ ಎಂದು ನನಗೂ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೌದು ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. 6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ಅಲ್ಲದೇ ಪ್ರತಿಪಕ್ಷಗಳಿಂದ ಸವದಿ ಬಗ್ಗೆ ಟೀಕೆ ಬಗ್ಗೆಯೂ ಉತ್ತರಿಸಿದ ಅವರು, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
ಟ್ರಾಫಿಕ್ ದಂಡಕ್ಕೂ ರಸ್ತೆ ದುಸ್ಥಿತಿಗೂ ಯಾವುದೇ ಸಂಬಂಧ ಇಲ್ಲ,ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರಂತ ದಂಡ ಹಾಕುವುದು ಅದಕ್ಕೂ ರಸ್ತೆ ಸ್ಥಿತಿಗೂ ಸಂಬಂಧ ಕಲ್ಪಿಸಬೇಡಿ. ಯಾರು ತಪ್ಪು ಮಾಡುತ್ತಾರೋ ಅವರಿಗೆ ದಂಡ ಹಾಕುತ್ತಾರೆ ಅದರಲ್ಲಿ ಹೆಚ್ಚು ಕಡಿಮೆ ಎಂಬುದು ಏನು ಇಲ್ಲ, ಸಂಚಾರ ನಿಯಮ ಪಾಲಿಸಿದರೆ, ದಂಡ ಕಟ್ಟುವ ಪ್ರಶ್ನೆ ಬರುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಕೇಂದ್ರ ವಿಧಿಸಿರುವ ಅಧಿಕ ಟ್ರಾಫಿಕ್ ದಂಡವನ್ನು ಸರ್ಮಥಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ