ರೌಡಿಗಳ ಮೇಲೆ ಪಶ್ಚಿಮ ವಿಭಾಗ ಪೊಲೀಸರಿಂದ ದಾಳಿ : ಮಾರಕಾಸ್ತ್ರ ವಶ

ಬೆಂಗಳೂರು

         ಬರುವ ಚುನಾವಣೆಯ ಹಿನ್ನಲೆಯಲ್ಲಿ ರೌಡಿಗಳ ಎಡೆ ಮುರಿಕಟ್ಟಲು ಮುಂದಾಗಿರುವ ಪಶ್ಚಿಮ ವಿಭಾಗದ ಪೊಲೀಸರು 150ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಠಾನೆಗೆ ಕರೆತಂದು ಬಿಸಿಮುಟ್ಟಿಸಿದ್ದಾರೆ.

        ಪಶ್ಚಿಮ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಮನೆಗಳ ಮೇಲೆ ಭಾನುವಾರ ಮುಂಜಾನೆ ದಿಢೀರ್ ದಾಳಿ ನಡೆಸಿ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳು ಹಳೆ ಆರೋಪಿಗಳು ಭೂಮಾಪಿಯಾದಲ್ಲಿ ತೊಡಗಿರುವವರನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

       ಚುನಾವಣೆ ವೇಳೆ ರೌಡಿ ಚಟುವಟಿಕೆಗಳನ್ನು ನಡೆಸಿ ಭಯ ಹುಟ್ಟಿಸುವುದು ಅಪರಾಧ ಕೃತ್ಯಗಳು ನಡೆಸಲು ಮುಂದಾಗುವುದನ್ನು ತಡೆಯಲು ತಡೆಯಲು ಪೆÇಲೀಸರು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಡಿಸಿಪಿ ರವಿ ಚನ್ನಣ್ಣನವರ್ ಅವರ ನೇತೃದಲ್ಲಿ ಮುಂಜಾನೆ 4ರಿಂದ ಉಪ್ಪಾರಪೇಟೆ ,ಕಾಟನ್‍ಪೇಟೆ ,ಜ್ಞಾನಭಾರತಿ ,ವಿಜಯನಗರ,ಕೆಂಗೇರಿ,ಚಾಮರಾಜಪೇಟೆ,ಇನ್ನಿತರ ಪೊಲೀಸ್ ಠಾಣೆಗಳ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

       ಸುಮಾರು 150ಕ್ಕೂ ಹೆಚ್ಚು ಮಂದಿ ರೌಡಿಗಳ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಕೆಲ ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು ಅವುಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link