ಕೊರಟಗೆರೆ
ತಾಲೂಕಿನ ಬರಕ ಗ್ರಾಮದ ಗೇಟ್ ಬಳಿ ಕೆ.ಟಿ.ದೊಡ್ಡಯ್ಯ(45) ಎಂಬ ವ್ಯಕ್ತಿ ಕೈ ಸಾಲ ಬಾದೆಗೆ ಮನನೊಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊರಟಗೆರೆ ಟೌನ್ ವಾಸಿಯಾಗಿದ್ದ ದೊಡ್ಡಯ್ಯ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು ಆದರೆ ಕೆಲ ತಿಂಗಳುಗಳಿಂದ ಗಟ್ಲಗೊಲ್ಲ ಹಳ್ಳಿಯ ಅತ್ತೆ ಮನೆಯಲ್ಲಿ ವಾಸವಿದ್ದರು.
ಕೈ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೆ ಮನನೊಂದು ಪಂಚೆಯಿಂದ ಕುತ್ತಿಗೆಗೆ ಬಿಗಿದುಕೊಂಡು ರಸ್ತೆ ಬದಿಯ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
