ಬೆಂಗಳೂರು
ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ನಗದು ಚಿನ್ನಾಭರಣ ದೋಚುತ್ತಿದ್ದ ದೇವರಜೀವನಹಳ್ಳಿ(ಡಿಜೆ)ಯ ಮೂವರು ಸುಲಿಗೆಕೋರರನ್ನು ನಂದಗುಡಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿ ಮೋದಿ ರಸ್ತೆಯ ಜಾಫರ್ ಶರೀಫ್ (28), ಇಲಿಯಾಸ್ ಪಾಷ (28), ಸಮೀರ್ ಪಾಷ (20) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಗಾಂಜಾ, ಮದ್ಯ, ಇನ್ನಿತರ ದುಶ್ಚಟಗಳನ್ನು ಹೊಂದಿದ್ದು, ಅದಕ್ಕೆ ಹಣ ಹೊಂದಿಸಲು ಸುಲಿಗೆ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಕಳೆದ ಫೆ. 16 ರಂದು ಮುಂಜಾನೆ 5ರ ವೇಳೆ ತಾವರೆಕೆರೆಯ ಹೆದ್ದಾರಿಯಲ್ಲಿ ಕಂಪನಿಯ ಕೆಲಸಕ್ಕೆ ಹೋಗಲು ಕ್ಯಾಬ್‍ಗೆ ಕಾಯುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಪ್ರವೀಣ್ ಸಂಗಪ್ಪ ಕಾರಕೂನ ಎಂಬುವರನ್ನು ಚಾಕು ತೋರಿಸಿ ಬೆದರಿಸಿ, ಹಲ್ಲೆ ನಡೆಸಿ 2 ಸಾವಿರ ನಗದನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








