ಚಳ್ಳಕೆರೆ
ಹಾಡುಹಗಲೇ ಇಲ್ಲಿನ ವಾಸವಿ ಕಾಲೋನಿಯಲ್ಲಿ ಮನೆಯೊಂದರ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಮನೆಯ ರೂಂನಲ್ಲಿದ್ದ ಲಾಕರನ್ನು ಮುರಿದು ಅದರಲ್ಲಿದ್ದ ಸುಮಾರು 350 ಗ್ರಾಂ ಬಂಗಾರ, 3.50 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ನಗರದ ವಾಸವಿ ಕಾಲೋನಿ ವಾಸಿ ಎಂ.ಆರ್ ಮಿಲ್‍ನ ಪಾಲುದಾರ ವಿಜಯನಾಗರಾಜು ಎಂಬುವವರಿಗೆ ಸೇರಿದ ಮನೆದಾಗಿದ್ದು, ಶನಿವಾರ ಪ್ರಯುಕ್ತ ಮನೆ ಬೀಗಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದು ಸ್ವಲ್ಪಹೊತ್ತಿನ ನಂತರ ವಿಜಯನಾಗರಾಜವರಿಗೆ ಯಾರೋ ದೂರವಾಣಿ ಮೂಲಕ ಕರೆ ಮಾಡಿ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ಧಾರೆ. ಕೂಡಲೇ ಮನೆಗೆ ಬಂದು ಬಾಗಿಲು ತೆರಿದ್ದನ್ನು ಕಂಡ ಆತ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಸ್ಥಳಕ್ಕೆ ಆಗಮಿಸಿ ಪಿಎಸ್‍ಐ ನೂರ್ ಆಹಮ್ಮದ್ ಮನೆಯ ಒಳಗೆ ಯಾರೂ ಹೋಗದಂತೆ ತಡೆದು ನಂತರ ಶ್ವಾನದಳ ಮತ್ತು ಬೆರಳ್ಳಚ್ಚು ದಾರರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ಧಾರೆ.
ವಿಜಯನಾಗರಾಜು ಪತ್ರಿಕೆಗೆ ಮಾಹಿತಿ ನೀಡಿ, ಬ್ಯಾಂಕ್‍ಗೆ ರಜೆಇದ್ದ ಪ್ರಯುಕ್ತ ಕೂಲಿಕಾರರಿಗೆ ಭಾನುವಾರ ಬಟವಾಡಿ ಹಾಗೂ ಇನ್ನಿತರೆ ಕಾರಣಗಳಿಗಾಗಿ ಬ್ಯಾಂಕ್‍ನಿಂದ 3.50 ಲಕ್ಷ ನಗದು ಹಣತಂದು ಮನೆಯಲ್ಲಿದ್ದು, ಸುಮಾರು 13 ಲಕ್ಷಕ್ಕೂ ಹೆಚ್ಚು ಮೌಲ್ಯದ 350 ಗ್ರಾಂ ಬಂಗಾರ ಆಭರಣವನ್ನು ಸಹ ಕಳ್ಳರು ದೋಚಿ ಪರಾರಿಯಾಗಿರುತ್ತಾರೆ. ವಾಸವಿ ಕಾಲೋನಿಯ ಜನಬೀಡ ರಸ್ತೆಯಲ್ಲೇ ಮಧ್ಯಾಹ್ನ ಸುಮಾರು 11.30ರ ವೇಳೆಯಲ್ಲಿ ಕಳ್ಳರು ಈ ಕೃತ್ಯ ವೆಸಗಿರುತ್ತಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ಧಾರೆ.
