ಹೊರಟ್ಟಿ ಸಚಿವ ಸ್ಥಾನದ ಬಗ್ಗೆ ಪರಿಷತ್ತಿನಲ್ಲಿ ಗಂಭೀರ ಚರ್ಚೆ

ಬೆಳಗಾವಿ

         ಮೇಲ್ಮನೆ ಹಿರಿಯ ಸದಸ್ಯ ಬಸವರಾಜಹೊರಟ್ಟಿಯವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪರಿಷತ್ತಿನಲ್ಲಿಂದು ಚರ್ಚೆ ನಡೆಯಿತು. ನೂತನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಮೇಲ್ಮನೆ ಸದಸ್ಯರು ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದರು.

        ಅಭಿನಂದನೆ ಸಲ್ಲಿಸಿ ಮಾತನಾಡಿದ ಜೆಡಿಎಸ್ ಸದಸ್ಯರ ಶರವಣ, ಬಸವರಾಜ ಹೊರಟ್ಟಿಯವರು ಈ ಹಿಂದೆ ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಈಗ ಸಭಾಪತಿ ಸ್ಥಾನವೂ ಅವರಿಗೆ ತಪ್ಪಿಹೋಗಿದೆ. ಹೀಗಾಗಿ ಹೊರಟ್ಟಿಯವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಎಲ್ಲರೂ ಚರ್ಚಿಸಬೇಕು ಎಂದರು.

        ಕಾಂಗ್ರೆಸ್ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡುತ್ತಾ, ಜೆಡಿಎಸ್‍ನಲ್ಲಿ ಎರಡು ಸ್ಥಾನಗಳು ಉಳಿದಿವೆ. ಹಾಗಾಗಿ ನೀವೇ ಯೋಚಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶರವಣ, ಕಾಂಗ್ರೆಸನಲ್ಲಿ 8 ಸ್ಥಾನಗಳಿವೆ. ಅದರಲ್ಲಿ ಒಂದನ್ನು ಜೆಡಿಎಸ್‍ಗೆ ನೀಡಿ. ನಿಮ್ಮ ಪಕ್ಷದವರಿಗೆ ಈ ಬಗ್ಗೆ ತಿಳಿಸಿ ಎಂದರು.

        ಈ ಸಂದರ್ಭದಲ್ಲಿ ಪರಿಷತ್ತಿನ ಕಾಂಗ್ರೆಸ್ ಕೆಲ ಶಾಸಕರು ಶರವಣ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಲ್ಲಂ ವೀರಭದ್ರಪ್ಪ ಕೋಟಾ ಹಂಚಿಕೆ ಬಗ್ಗೆ ಈಗ ಚರ್ಚಿಸುವುದು ಬೇಡ. ಹೊರಟ್ಟಿಯವರಿಗೆ ಸೂಕ್ತ ಸ್ಥಾನಮಾನ ಹೇಗೆ ನೀಡುವುದು ಎನ್ನುವುದರ ಬಗ್ಗೆ ಚಿಂತನೆ ನಡೆಯಲಿ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap