ಬೆಂಗಳೂರು:
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ದೀಪಾವಳಿ ಬಂಪರ್ ಕೊಡುಗೆ ನೀಡಿದೆ.ಸುಮಾರು 2000 ರೂ ಗೌರವಧನ ಹೆಚ್ಚಿಸುವ ಮೂಲಕ ದೀಪಾವಳಿಗೆ ಬಹುಮಾನ ನೀಡಿದೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ,ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಸೇರಿ ಒಟ್ಟು 1.28 ಲಕ್ಷ ಕಾರ್ಯಕರ್ತೆಯರಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ ಹಾಗೂ 500 ರೂ ಸೇರಿಸಿ 2000 ರೂ. ಗೌರವಧನ ಹೆಚ್ಚಳ ಮಾಡಲಾಗು ವುದು. ಒಟ್ಟು ಈಗ 10,000 ರೂ ನೀಡ ಲಾಗುವುದು.ಅಕ್ಟೋಬರ್ 2018 ರಿಂದ ಈ ಆದೇಶ ಪೂರ್ವಾನ್ವಯವಾಗು ವಂತೆ ಜಾರಿಗೆ ಬರಲಿದೆ.ಒಂದು ವರ್ಷ ತಡೆ ಹಿಡಿದ ಗೌರವಧನ ಬರಲಿದೆ ಎಂದು ಸ್ಪಷ್ಟಪಡಿ ಸಿದರು.
ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 8000 ರು.ಇತ್ತು, ಈಗ ರಾಜ್ಯ ಸರ್ಕಾರದ 1500 ರು. ಮತ್ತು ಕೇಂದ್ರ ಸರ್ಕಾರದ 500 ರು. ಪಾಲು ಸೇರಿ ಈಗ 10,000 ಗೌರವ ಧನ ಸಿಗಲಿದೆ. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 4750 ರು.ಗೌರವ ಧನ ಇತ್ತು.ಈಗ ರಾಜ್ಯ ಸರ್ಕಾರದ 1250 ರು.ಕೇಂದ್ರ ಸರ್ಕಾರದ 500 ರು. ಸೇರಿ ಒಟ್ಟು 6500 ರು. ಗೌರವಧನ ಸಿಗಲಿದೆ ಎಂದರು.