ಕೊರಟಗೆರೆ : ಬಸ್ ಡಿಕ್ಕಿ ಹೊಡೆದು ಜಿಂಕೆ ಸಾವು

ಕೊರಟಗೆರೆ:-

     ಆಹಾರ ಅರಸಿ ಸಿದ್ದರಬೇಟ್ಟ ಅರಣ್ಯದಿಂದ ತುಂಬಾಡಿ ಗ್ರಾಮದ ರೈತನ ಅಡಿಕೆ ತೋಟಕ್ಕೆ ಆಗಮಿಸಿದ ಜಿಂಕೆ(ಕಡವೆ)ಗೆ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿರುವ ರಭಸಕ್ಕೆ ಕಡವೆಯು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

    ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ತುಂಬಾಡಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕಡವೆಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಚಾಲಕ ಮತ್ತು ನಿರ್ವಾಹಕ ಬಸ್ಸಿನ ಸಮೇತ ಸ್ಥಳದಿಂದ ಪರಾರಿ ಆಗಿದ್ದಾರೆ. ಖಾಸಗಿ ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಕಡವೆ ಸುಮಾರು 30ಮೀ ದೂರಕ್ಕೆ ಹಾರಿಹೋಗಿರುವ ಘಟನೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ತುಂಬಾಡಿ ಗ್ರಾಮದ ರೈತ ಕೃಷ್ಣಚಾರ್ ಎಂಬುವರ ಅಡಿಕೆ ತೋಟದಿಂದ ರಾಜ್ಯ ಹೆದ್ದಾರಿ ರಸ್ತೆ ದಾಟಿ ಇದೇ ಗ್ರಾಮದ ರೈತ ಆದಿನಾರಾಯಣ ಎಂಬುವರ ರಾಗಿ ಬೆಳೆಯ ಮೂಲಕ ತುಂಬಾಡಿ ಬೆಟ್ಟ ಹಾಗೂ ಹೊಸಕೆರೆಯ ಅರಣ್ಯಕ್ಕೆ ಹೋಗುವ ವೇಳೆ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಹೆಣ್ಣು ಜಿಂಕೆ(ಕಡವೆ) ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೊಂದು ಗಂಡು ಕಡವೆ ಪ್ರಾಣಪಾಯದಿಂದ ತಪ್ಪಿಸಿಕೊಂಡು ಅರಣ್ಯಕ್ಕೆ ಹೋಗಿದೆ.

    ಕೊರಟಗೆರೆಯಿಂದ ಮಧುಗಿರಿಗೆ ಸುಮಾರು 3.10ಕ್ಕೆ ಹಾದುಹೋಗುವ ಖಾಸಗಿ ಬಸ್ಸಿನ ವಾಹನ ಚಾಲಕನ ಅತಿವೇಗ ಮತ್ತು ಅಜಾರುಕತೆಯ ಚಾಲನೆಯಿಂದ ತುಂಬಾಡಿ ಬಳಿ ಕಡವೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಮೃತಪಟ್ಟ ಕಡವೆಯ ಬಾಯಿಗೆ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ನೀರು ಬಿಟ್ಟು ಸತ್ತ ನಂತರ ಪರಾರಿ ಆಗಿದ್ದಾರೆ.

   ತುಂಬಾಡಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಕಡವೆ ಮೃತಪಟ್ಟ ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ನಾಗರಾಜು, ಹನುಮಂತಪ್ಪ ಬೇಟಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದು ತನಿಖೆ ಕೈಗೊಂಡಿದಾರೆ. ದಾಸರಹಳ್ಳಿ ಪಶು ಚಿಕಿತ್ಸಾಲಯದ ವೈದ್ಯೆ ವಿಧ್ಯಾಶ್ರೀ ಕಡವೆಯ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

   ಕೊರಟಗೆರೆ ನ್ಯಾಯಾಲಯದಿಂದ ಅನುಮತಿ ಪಡೆದು ಅರಣ್ಯ ಇಲಾಖೆ ಅಧಿಕಾರಿವರ್ಗ ಮೃತಪಟ್ಟ ಕಡವೆಯ ಅಗ್ನಿಸ್ಪರ್ಶ ಮಾಡಲಿದ್ದಾರೆ. ನ್ಯಾಯಧೀಶರಿಂದ ವಿಶೇಷ ಅನುಮತಿ ಪಡೆದು ಅಪಘಾತದಲ್ಲಿ ಮೃತಪಟ್ಟ ಕಡವೆಯ ತನಿಖೆಯನ್ನು ಮಧುಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತನಿಖೆ ನಡೆಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link