ಬೆಂಗಳೂರು
ನಟಿ ಶ್ರುತಿ ವಿರುದ್ಧ ನಟ ಅರ್ಜುನ್ ಸರ್ಜಾ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು 22ನೇ ಸಿಟಿ ಸಿವಿಲ್ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ನ್ಯಾಯಾಧೀಶ ಬಿ. ನಾರಾಯಣಪ್ಪ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಸರ್ಜಾ ಪರ ವಕೀಲರು ವಾದ ಮಂಡನೆ ಮಾಡಿದ್ದು, ಶ್ರುತಿ ಅವರಿಗೆ ತಕ್ಷಣಕ್ಕೆ ನಿರ್ಭಂದಾಜ್ಞೆ ಹೊರಡಿಸಬೇಕೆಂದು ಕೋರಿದರು. ಶ್ರುತಿ ಪರ ವಕೀಲೆ ಜೈನಾ ಕೊಠಾರಿ ಮಾನನಷ್ಟ ಮೊಕದ್ದಮೆ ಹಾಗೂ ನಿರ್ಬಂಧ ಹೇರಿಕೆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿದರು.
ಇದೇ ವೇಳೆ ಮಿ-ಟೂ ಪ್ರಕರಣ ಸಂಬಂಧ ಶ್ರುತಿ ಪರ ವಕೀಲ ಅನಂತ್ ನಾಯ್ಕ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತ್ ನಾಯ್ಕ್, ಪ್ರಕರಣ ಸಂಬಂಧ ಆರೋಪಿ ಅರ್ಜುನ್ ಸರ್ಜಾ ಅವರನ್ನು ಬಂಧಿಸಬೇಕು. ಲೈಂಗಿಕ ದೌರ್ಜನ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸರು ತಡ ಮಾಡಿದರೆ ಸಾಕ್ಷ್ಯ ನಾಶ ಆಗುವ ಸಾಧ್ಯತೆ ಇದೆ. ಆದರೆ ಆರೋಪಿ ಪ್ರಭಾವಿಯಾಗಿರುವ ಹಿನ್ನೆಲೆಯಲ್ಲಿ ಸಾಕ್ಷ್ಯಗಳ ಮೇಲೆ ಖಂಡಿತ ಪ್ರಭಾವ ಬೀರುವ ಸಾಧ್ಯತೆ ಇದೆ. ಆತನನ್ನು ಬಂಧಿಸಿದಾಗ ಮಾತ್ರ ಪೊಲೀಸರು ಪಾರದರ್ಶಕ ತನಿಖೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
