ಬೆಂಗಳೂರು
ಸಾರ್ವಜನಿಕವಾಗಿ ಕ್ಷೌರಿಕ ಸಮಾಜದ ವೃತ್ತಿ ನಿಂದನೆ ಮಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸವಿತಾ ಸಮಾಜ ಹಾಗೂ ಸಮತಾ ಸೈನಿಕ ದಳದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಮುಂದೆ ಮಂಗಳವಾರ ಬೆಳಿಗ್ಗೆ ಸೇರಿದ ಸವಿತಾ ಸಮಾಜ ಹಾಗೂ ಸಮತಾ ಸೈನಿಕ ದಳದ ನೂರಾರು ಕಾರ್ಯಕರ್ತರು ಕ್ಷೌರಿಕ ಸಮಾಜದ ವೃತ್ತಿ ನಿಂದನೆ ಮಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೇಲೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ಷೌರಿಕ ವೃತ್ತಿಯನ್ನು ಹಾಗೂ ಕ್ಷೌರಿತ ಜಾತಿನಿಂದನೆ ಪದವನ್ನು ಸಾರ್ವಜನಿಕರು ಬಳಸುವುದು ಸಾಮಾನ್ಯವಾಗಿದ್ದು, ಅವರ ಸಾಲಿಗೆ ಶಾಸಕರೂ ಸೇರಿದ್ದಾರೆ. ಶಾಸಕರ ಮೇಲೆ ಪ್ರಕರಣ ದಾಖಲಿಸಿ ಕ್ರಮಕೈಗೊಂಡರೆ ವೃತ್ತಿ ನಿಂದನೆ ಮಾಡುವುದು ಕಡಿಮೆಯಾಗಲಿದೆ ಎಂದು ಸವಿತಾ ಸಮಾಜದ ಮುಖಂಡ ಎನ್. ನರಸಿಂಹಯ್ಯ ತಿಳಿಸಿದ್ದಾರೆ.ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳುವಂತೆ ಸಮತಾ ಸೈನಿಕ ದಳದ ವೆಂಕಟಸ್ವಾಮಿ ಅವರು ಆಗ್ರಹಿಸಿದರು.