ಬೆಂಗಳೂರು
ಮಹಿಳೆಯರೇ ಇರುವ ಮನೆಗಳನ್ನು ಗುರುತಿಸಿ ತಮಿಳುನಾಡಿನಿಂದ ದರೋಡೆಕೋರರನ್ನು ಕರೆಸಿ ಮನೆಗಳವು ಮನೆಕಳವು ಮಾಡಿಸುತ್ತಿದ್ದ ಖತರ್ನಾಕ್ ಮಹಿಳೆ ಸೇರಿ 11 ಮಂದಿ ದರೋಡೆಕೋರರನ್ನು ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೋಣನಕುಂಟೆ ಗಿರಿಜಮ್ಮ (47), ರಾಜು ಅಲಿಯಾಸ್ ಸ್ಟೀಫನ್ ರಾಜು (51), ರಘುವರನ್ ಅಲಿಯಾಸ್ ರಘು (30), ಸುರೇಶ (36), ಲಿಂಗರಾಜು (34) ಬಂಧಿತ ರಾಜ್ಯ ದರೋಡೆಕೋರರಾಗಿದ್ದಾರೆ.
ಇದಲ್ಲದೆ ಅಂತರರಾಜ್ಯ ದರೋಡೆಕೋರರಾದ ಸ್ಟೀಫನ್ (25), ಮಣಿಕಂಠನ್ ಅಲಿಯಾಸ್ ಮಣಿ (25), ಸತೀಶ್ (20), ರಾಜೇಶ್ (21), ಅಬ್ದುಲ್ ಸಮ್ಮರ್ (29), ಸತೀಶ್ ಕುಮಾರ್ ಅಲಿಯಾಸ್ ಅಪ್ಪು (24)ನನ್ನು ಬಂಧಿಸಲಾಗಿದೆ .ಬಂಧಿತರಿಂದ 2 ಆಟೋ, ಚಿನ್ನ-ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಕೋಣನಕುಂಟೆ, ಕಾಡುಗೋಡಿ, ಮಲ್ಲೇಶ್ವರಂನ ತಲಾ 1 ದರೋಡೆ ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಜ್ ತಿಳಿಸಿದ್ದಾರೆ.
ಕೋಣನಕುಂಟೆಯ ಚುಂಚಘಟ್ಟ ಮುಖ್ಯರಸ್ತೆಯ ಪ್ರಭಾವತಿ ಸೇರಿ ಇಬ್ಬರು ಮಹಿಳೆಯರಿದ್ದ ಮನೆಗೆ ನುಗ್ಗಿ 280 ಗ್ರಾಂ ಚಿನ್ನ, ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಗಿರಿಜಮ್ಮ ಮಹಿಳೆಯರು ವಾಸವಾಗಿರುವ ಮನೆಗಳನ್ನು ಗುರುತಿಸಿ, ತಮಿಳುನಾಡಿನಿಂದ ಇತರ ದರೋಡೆಕೋರರನ್ನು ಕರೆಸಿ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








