ಚಿತ್ರದುರ್ಗ
ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದಿರುವ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಬುಧವಾರ ಪ್ರತಿಭಟನೆ ನಡೆಸಿದರು
ನಗರದ ಸ್ಟೇಟ್ ಬ್ಯಾಂಕ್ ಅಪ್ ಮೈಸೂರು ಶಾಖೆಯ ಮುಂಭಾಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ವಿರುದ್ಧ ಪ್ರತಿಭಟನೆ ಮಾಡಿದರು. ಬಳಿಕ ಒನಕೆ ಒಬವ್ವ ವೃತ್ತದಲ್ಲಿ ಪ್ರಧಾನಿಯವರ ಭಾವಚಿತ್ರವನ್ನು ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು
ಪ್ರಧಾನಿ ಅವರು ಏಕಾಏಕಿ ನೋಟುಗಳನ್ನು ರದ್ದು ಮಾಡಿದ್ದರಿಂದ ದೇಶಕ್ಕೆ ಯಾವುದೇ ಲಾಭವಾಗಲಿಲ್ಲ. ಬದಲಾಗಿ ಆರ್ಥಿಕ ಬಿಕ್ಕಟ್ಟು ಸೃಷ್ಠಿಯಾಗಿದೆ.
ಬಡವರು, ಸಾಮಾನ್ಯ ಜನರಿಗೆ ಇದರಿಂದ ಬಾರೀ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು
ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಪಿ.ಮಧುಪಾಲೇಗೌಡ ಮಾತನಾಡಿ ಭಾರತ ದೇಶದಲ್ಲಿ ನೋಟು ಅಮಾನ್ಯೀಕರಣ ಮಾಡಿ 2ವರ್ಷ ಕಳೆದರು ಭಾರತ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ದೇಶದ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಮಧ್ಯಮ ವರ್ಗದವರಿಗೆ ದೊಡ್ಡ ಅನ್ಯಾಯ ಮಾಡಿ ಭಾರತದ ದೇಶದಲ್ಲಿರುವ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದು ಆರೋಪಿಸಿದರು
ದೇಶದ ನಿರುದ್ಯೋಗಿ ಯುವಕರಿಗೆ 1 ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸುವುದಾಗಿ ಸುಳ್ಳು ಭರವಸೆಯನ್ನು ನೀಡಿ ಅನ್ಯಾಯ ಮಾಡಿದ್ದಾರೆ. ನೋಟ್ ಅಮಾನ್ಯೀಕರಣದಿಂದ ದೇಶದಲ್ಲಿರುವ ಶ್ರೀಮಂತರು ಯಾರು ಸಹ ಹಸು ನೀಗಿದ ಉದಾಹರಣೆಗಳಿಲ್ಲ. ನೋಟ್ ಅಮಾನ್ಯೀಕರಣದಿಂದ ಬಡವರು ಹಾಗೂ ಮಧ್ಯಮ ವರ್ಗದವರು ಮಾತ್ರ ಹಸು ನೀಗಿದರು ಇದು ಭಾರತ ದೇಶದಲ್ಲಿಯೇ ದೊಡ್ಡ ಹಗರಣವಾಗಿದೆ ಎಂದು ಟೀಕಿಸಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸುನೀಲ್ ಬಿದ್ರಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಕಾರೇಹಳ್ಳಿ ಉಲ್ಲಾಸ್, ಅಬ್ದುಲ್ರೆಹಮಾನ್, ಎಸ್.ಕರಿಯಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ನಾಯ್ಡು, ಸೈಯದ್ಖುದ್ದೂಸ್, ವಸೀಂ ಬಡಮಕಾನ್, ದಾದಾಪೀರ್, ಕಾರ್ಯದರ್ಶಿಗಳಾದ ಶಶಾಂಕ್, ಸಂದೀಪ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರಭಾರೆ ಅಧ್ಯಕ್ಷರಾದ ವಸೀಂಅಕ್ರಂ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳಾದ ಟಿ.ರಮೇಶ್ ಹೊಳಲ್ಕೆರೆ, ರಫಿಕ್ಉಲ್ಲಾ ಹಿರಿಯೂರು, ಕಿರಣ್ಕುಮಾರ್ ಹೊಸದುರ್ಗ, ಡಾ.ದಾದಾಪೀರ್ ಮೊಳಕಾಲ್ಮೂರು, ಹಿರಿಯೂರು ವಿಧಾನಸಭಾ ಉಪಾಧ್ಯಕ್ಷರಾದ ಸಿಗ್ಬತ್ವುಲ್ಲಾ, ಶರೀಫ್, ಚಿತ್ರದುರ್ಗ ವಿಧಾನಸಭಾ ಪ್ರಧಾನ ಕಾರ್ಯದರ್ಶಿಯಾದ ಆಜಾಮ್, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ, ರವಿಕುಮಾರ್, ಕಾರ್ಯದರ್ಶಿಗಳಾದ ಬಸವರಾಜ್, ಸಂತೋಷ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ