ಬೆಂಗಳೂರು:
ವಿಶ್ವದಾದ್ಯಂತ ಮಾರಣಾಂತಿಕಬಾಗಿ ಹಬ್ಬತ್ತಿರುವ ಭೀತಿಗೆ ಕಾರಣವಾಗಿರುವ ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಡದಂತೆ ಸರ್ಕಾರ ಪ್ರಯತ್ನ ನಡೆಸುತ್ತಿದ್ದರೆ ಇತ್ತ ಚಿಕುನ್ ಗುನ್ಯಾ ಮತ್ತು ಡೆಂಘೀ ಪ್ರಕರಣಗಳ ಸಂಖ್ಯೆಯೂ ಸದ್ದಿಲ್ಲದೇ ಹೆಚ್ಚಾಗುತ್ತಿದೆ.
ವೈರಸ್ ನಿಂದ ಹರಡುವ ಕಾಯಿಲೆಗಳ ನಿಯಂತ್ರಣ ಕಾರ್ಯಕ್ರಮವನ್ನು ಉಲ್ಲೇಖಿಸಿರುವ 2019-20ನೇ ಸಾಲಿನ ರಾಜ್ಯ ಆರ್ಥಿಕ ಸರ್ವೇ ಪ್ರಕಾರ, 2018ರಲ್ಲಿ ಡೆಂಗ್ಯೂನಿಂದ ನಾಲ್ವರು ಮೃತಪಟ್ಟಿದ್ದು, 4, 848 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 13 ಮಂದಿ ಸಾವನ್ನಪ್ಪಿದ್ದು, 15, 586 ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 81 ರಷ್ಟು ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.57 ರಷ್ಟು ಅಂದರೆ 9 ಸಾವಿರ ಡೆಂಘೀ ಪ್ರಕರಣಗಳು ದಾಖಲಾಗಿವೆ.ಜನಸಂಖ್ಯೆಯಿಂದಾಗಿ ಡೆಂಘೀ ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದಾಗ್ಯೂ, ಇದೇ ಕಾರಣದಿಂದಾಗಿ ಇತ್ತರ ಕಡೆಗಳಲ್ಲಿ ಕಾಯಿಲೆಗಳ ಬಗ್ಗೆ ಜನರು ದಾಖಲಿಸುತ್ತಿಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಕೊರೋನಾ ವೈರಸ್ ಹರಡದಂತೆ ಕಣ್ಗಾವಲು ತಂಡಗಳು ಇದೀಗ ನಿಗಾ ವಹಿಸಿವೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಮಲೆರಿಯಾ, ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳು ಕಡಿಮೆಯಾಗಿವೆ. 2018ರಲ್ಲಿ 380, 2019ರಲ್ಲಿ 329 ಜೆಇ ಪ್ರಕರಣಗಳು ಕಂಡುಬಂದಿದ್ದರೆ 2018ರಲ್ಲಿ 5,289ರಷ್ಟಿದ್ದ ಮಲೇರಿಯಾ ಪ್ರಕರಣಗಳು 2019ರಲ್ಲಿ 3, 206ಕ್ಕೆ ಇಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ