ದೇಶದ ಭವಿಷ್ಯಕ್ಕಾಗಿ ಮತಹಕ್ಕು ಚಲಾಯಿಸಿ;ಸತ್ಯಭಾಮ

ಚಿತ್ರದುರ್ಗ;

         ಗೃಹ ರಕ್ಷಕದಳದ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಚಿತ್ರದುರ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಾಯಿತು. ಮತದಾನ ಜಾಗೃತಿ ಅಂಗವಾಗಿ ಗೃಹರಕ್ಷಕರು ನಗರದ ಪ್ರಮುಖ ಬೀದಿಗಳಲ್ಲಿ ಪಂಥ ಸಂಚಲನ ನಡೆಸಿ ಜನತೆಯಲ್ಲಿ ಜಾಗೃತಿ ಮೂಡಿಸಿದರು.

         ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸತ್ಯಬಾಮ ಮಾತನಾಡಿ ಚುನಾವಾಣೆಯಲ್ಲಿ ಜಾತಿ ಧರ್ಮಕ್ಕೆ ಆದ್ಯತೆ ನೀಡಬೇಡಿ ನಿರ್ಭಿತವಾಗಿ ಮತಚಲಾಯಿಸಿ ಹಾಗೂ ಇತರೇ ಆಸೆಗಳಿಗೆ ಬಲಿಯಾಗಬೇಡಿ ನಿಮಗೆ ಬೇಕಾದ ಉತ್ತಮ ಅಭ್ಯರ್ಥಿಗೆ ಮತ ಹಾಕಿ ವಿನಾಕಾರಣ ಮತಹಾಕುವುದನ್ನು ಮರೆಯಬೇಡಿ ಎಂದರು ಒಂದೊಂದು ಮತವು ದೇಶದ ಭವಿಷ್ಯವನ್ನು ಅವಲಂಬಿಸಿರುತ್ತದೆ ಹಿಂದೆ ಕಡಿಮೆ ಮತದಾನವಾಗಿದ್ದು ಈ ಭಾರಿ 90 ರಷ್ಟು ಮತದಾನವಾಗಬೇಕಾಗಿದೆ ಎಂದು ತಿಳಿಸಿದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ.ಸಂಧ್ಯಾ ರವರು ಮಾತನಾಡಿ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಸಲು ಗೃಹರಕ್ಷಕರ ಜವಾಬ್ದಾರಿಯಾಗಿದೆ. ಪೊಲೀಸರೊಂದಿಗೆ ಮತದಾನ ಕೇಂದ್ರದಲ್ಲಿದ್ದು ಶಿಸ್ತುಬದ್ದವಾಗಿ ವರ್ತಿಸಬೇಕು ಪೊಲೀಸರಿಗಿರುವಷ್ಟೇ ಜವಾಬ್ದಾರಿ ಗೃಹರಕ್ಷಕರ ಮೇಲಿದೆ ಮತದಾನಕ್ಕೆ ಬರುವ ವಿಕಲಚೇತನರು ಹಾಗೂ ವೃದ್ಧರಿಗೆ ಮತದಾನ ಮಾಡಲು ಸಹಕರಿಬೇಕು.

        ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗೃಹರಕ್ಷಕರಿಗೆ ಲೋಕಸಭಾ ಚುನಾವಣೆಯ ಬಂದೋಬಸ್ತ್ ಬಗ್ಗೆತರಬೇತಿ ನೀಡಲಾಗಿದ್ದು ಅಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತರೀತಿಯಿಂದ ವರ್ತಿಸಿ ಹೆಚ್ಚಿನ ಮತದಾನವಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.

        ಇದೇ ಸಂದರ್ಭದಲ್ಲಿ ಮತದಾನದ ವಿ.ವಿ. ಪ್ಯಾಟ್ ಪ್ರಾತ್ಯಕ್ಷತೆ ನೀಡಲಾಯಿತು. ನಂತರ ಕಡ್ಡಾಯವಾಗಿ ಮತದಾನ ಮಾಡುತ್ತೇವೆಂದು ಪ್ರತಿಜ್ಞಾ ವಿಧಿ ಬೋದಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಹಲಿಂಗ, ಬಿ.ನಂದಗಾವಿ, ಹಾಗೂ ಗೃಹ ರಕ್ಷಕದಳದ, ಜಿಲ್ಲಾ ಬೋಧಕರಾದ ಜಿ. ಹೆಚ್ ಲೊಕೇಶ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap