ದೇಶದ ಪ್ರಗತಿಗೆ ಬಿಜೆಪಿಗೆ ಬೆಂಬಲಿಸಿ;ಶ್ರೀನಿವಾಸ್

ಚಿತ್ರದುರ್ಗ

     ಭಾರತ ದೇಶ ಈಗ ಪ್ರಗತಿಯತ್ತ ಸಾಗುತ್ತಿದೆ ಇದು ಹೀಗೇಯೇ ಮುಂದುವರೆಯಬೇಕಾದರೆ ಬಿಜೆಪಿಗೆ ಮತವನ್ನು ಹಾಕಬೇಕಿದೆ ಮತ ಹಾಕದಿದ್ದರೆ ಪ್ರಗತಿಗೆ ಕುಂಠಿತವಾಗಲಿದೆ ಇದರ ಬಗ್ಗೆ ಬುದ್ದಿವಂತರು ಆಲೋಚನೆಯನ್ನು ಮಾಡಬೇಕಿದೆ ಎಂದು ಬಿಜೆಪಿ ರಾಜ್ಯ ಓ.ಬಿ.ಸಿ. ಮೋರ್ಚ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಕರೆ ನೀಡಿದ್ದಾರೆ.

      ನಗರದ ಹೋಟೆಲ್ ಐಶ್ವರ್ಯ ಪೋರ್ಟ್‍ನಲ್ಲಿ ಭಾನುವಾರ ಪತ್ರಿಕಾ ಗೋಷ್ಠಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ದೇಶವನ್ನು ಒಂದು ಹಂತಕ್ಕೆ ಮೋದಿಯವರು ತಂದು ನಿಲ್ಲಿಸಿದ್ದಾರೆ, ಇದು ಹೀಗೇಯೆ ಮುಂದುವರೆಯಬೇಕಾದರೆ ಅವರನ್ನು ಮುಂದಿನ 5 ವರ್ಷಕ್ಕೆ ಮತ್ತೋಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕಿದೆ ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ. ಹಿಂದೆ ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ದೇಶ ಬೇರೆ ದೇಶಗಳಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಮೋದಿಯವರು ದೇಶದ ಪ್ರಧಾನ ಮಂತ್ರಿಯಾದ ಮೇಲೆ ಎಲ್ಲಾ ದೇಶದವರು ಸಹಾ ಗೌರವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

        ಕೆಲವೊಂದು ಜನತೆ ಚುನಾವಣೆಯಲ್ಲಿ ಮತವನ್ನು ಚಲಾವಣೆ ಮಾಡದೆ ದೇಶ ಮತ್ತು ಅದರ ಪ್ರಗತಿಯ ಬಗ್ಗೆ ಮಾತನಾಡುತ್ತಾರೆ ನನ್ನ ಪ್ರಕಾರ ಚುನಾವಣೆಯಲ್ಲಿ ಮತವನ್ನು ಹಾಕದವರು ದೇಶದ ಪ್ರಗತಿ ಮತ್ತು ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಮತವನ್ನು ಹಾಕದವರ ಕಾರ್ಯ ವೈಖರಿಯನ್ನು ಟೀಕಿಸಿದ ಶ್ರೀನಿವಾಸ್, ಮತವನ್ನು ಚಲಾಯಿಸುವುದು ದೇಶದ ಪ್ರತಿಯೊಬ್ಬ ಮತದಾರ ಹಕ್ಕು ಅದನ್ನು ಚಲಾಯಿಸಿ ನಂತರ ದೇಶ, ಪ್ರಗತಿಯ ಬಗ್ಗೆ ಮಾತನಾಡಬೇಕಿದೆ. ದೇಶದಲ್ಲಿ ಉತ್ತಮವಾದ ಸರ್ಕಾರ ರಚನೆಯಾಗಬೇಕಾದರೆ ಎಲ್ಲರು ಸಹಾ ತಪ್ಪದೆ ಮತವನ್ನು ಹಾಕಬೇಕಿದೆ ಎಂದು ಮನವಿ ಮಾಡಿದರು.

         ಮೋದಿಯವರ ದೇಶದ ಪ್ರದಾನ ಮಂತ್ರಿಯಾದ ಮೇಲೆ ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಜನಾಂಗಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಿದ್ದಾರೆ ಇವರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿ ಎಲ್ಲರಂತೆ ಬದುಕನ್ನು ನಡೆಸಲು ಸಹಕಾರಿಯಾಗಿದ್ದಾರೆ ಎಂದ ಅವರು,ಭಾರತ ಈಗ ಮೋದಿ ನೇತೃತ್ವದಲ್ಲಿ ಪ್ರಗತಿಯನ್ನು ಕಾಣುತ್ತಿದೆ ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಡಿ, ಈ ಅಭ್ಯರ್ಥಿಯಾಗಿರುವ ನಾರಾಯಣ ಸ್ವಾಮಿಯವರು ಹಿಂದೆ ಸಚಿವರಾಗಿದ್ದಾಗ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೇಸ್ ಪಕ್ಷದ ದಲಿತರನ್ನು ಮತ ಬ್ಯಾಂಕ್ ಆಗಿ ಮಾತ್ರವೇ ನೋಡುತ್ತಿದೆ ಅವರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಮಾತ್ರ ಹಿಂದೆ ಬಿದ್ದಿದೆ ಎಂದು ದೂರಿದರು.

          ಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಶಿವಣ್ಣಚಾರ್, ಸಂಪತ್‍ಕುಮಾರ್ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap