ದೇಶದ ಉತ್ತಮ ಭವಿಷ್ಯಕ್ಕೆ ಮೈತ್ರಿ ಬೆಂಬಲಿಸಿ: ಪಿಜಿಆರ್ ಸಿಂಧ್ಯಾ

ತುಮಕೂರು

      ದೇಶದ ಭವಿಷ್ಯ ನಿರ್ಧರಿಸುವ ಜೊತೆಗೆ ರಾಜ್ಯದ ಆಡಳಿತಕ್ಕೆ ಸ್ಥಿರತೆ ತಂದು ಕೊಡಲಿರುವ ಕಾರಣದಿಂದ ಈ ಲೋಕಸಭಾ ಚುನಾವಣೆ ಮಹತ್ವವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಪಡೆಯಬೇಕಾಗಿದೆ. ಕೇವಲ ಸಂಸದರ ಆಯ್ಕೆ ಎನ್ನುವ ಬದಲು ದೇಶಕ್ಕೊಬ್ಬ ಸಮರ್ಥ ನಾಯಕ ಬೇಕು ಎನ್ನುವ ಕಾರಣಕ್ಕೆ ತುಮಕೂರು ಕ್ಷೇತ್ರದಿಂದ ದೇವೆಗೌಡರ ಆಯ್ಕೆ ಆಗಬೇಕಾಗಿದೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯ ಹೇಳಿದರು.

      ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ, ಸಂಸತ್ತಿನ ಮೇಲೆ ಪ್ರಭಾವ ಬೀರುವ ಕರ್ನಾಟಕದ ಕೆಲವೇ ನಾಯಕರಲ್ಲಿ ಒಬ್ಬರು ದೇವೆಗೌಡರು, ಮತ್ತೊಬ್ಬರು ಮಲ್ಲಿಕಾರ್ಜುನ ಖರ್ಗೆಯವರು. ಹೀಗಾಗಿ ಇಂತಹ ನಾಯಕರು ದೇಶದ ಹಿತದೃಷ್ಟಿಯಿಂದ ಪಾರ್ಲಿಮೆಂಟಿಗೆ ಆಯ್ಕೆ ಆಗಲೇ ಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

         ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ದೇವೇಗೌಡರು ಅಧಿಕಾರ ಅನುಭವಿಸಿದ್ದು ಕಡಿಮೆ. ನೀರಾವರಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ದೇವೇಗೌಡರು ಅಧಿಕಾರ ಮಾಡಿದ್ದು ಕೇವಲ ಐದೂವರೆಯಿಂದ ಆರು ವರ್ಷ ಮಾತ್ರ. ಆದರೆ ಎಷ್ಟೋ ಮುಖಂಡರು ರಾಜಕೀಯವಾಗಿ ಬೆಳೆಯಲು ಕಾರಣರಾಗಿದ್ದಾರೆ. ಇವರಿಂದ ಬೆಳೆದವರು ಇವರಿಗಿಂತ ಹೆಚ್ಚು ಕಾಲ ಅಧಿಕಾರ ಅನುಭವಿಸಿದ್ದಾರೆ.

         ಕೇವಲ ಅಧಿಕಾರಕ್ಕೆ ಅಂಟಿಕೊಳ್ಳದೆ ದೇವೇಗೌಡರು ರಾಜ್ಯ, ರಾಷ್ಟ್ರದ ಹಿತಕ್ಕಾಗಿ ಸಾರ್ವರ್ಜನಿಕ ಬದುಕಿನಲ್ಲಿ ತೊಡಗಿಕೊಂಡಿರುವ ಮುತ್ಸದ್ದಿ. ಕಾವೇರಿ ಸಮಸ್ಯೆ, ರೈಲ್ವೆ ಯೋಜನೆ ಹೀಗೆ ಯಾವುದೇ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸುವ ಸಾಮಥ್ರ್ಯ ಇವರಿಗಿದೆ. ರಾಜ್ಯಕ್ಕೆ ಇಂತಹ ಸಮಸ್ಯೆಗಳು ಎದುರಾದಾಗ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆ ಪಕ್ಷದ ನಾಯಕರು ದೇವೇಗೌಡರ ಸಲಹೆ ಪಡೆದು ಮುಂದುವರೆಯುತ್ತಾರೆ.

        ದೇವೆಗೌಡರು ಈ ದೇಶದ ದೊಡ್ಡ ಕೊಡುಗೆ ಎಂದು ಪಿಜಿಆರ್ ಸಿಂಧ್ಯ ಹೇಳಿದರು.ದೆಹಲಿ ಸರ್ಕಾರದಲ್ಲಿ ದಕ್ಷಿಣ ಭಾರತದವರಿಗೆ ಮಾನ್ಯತೆ ಸಿಕ್ಕಿರುವುದು ಕಮ್ಮಿ. ದಕ್ಷಿಣ ಭಾರತದಲ್ಲಿ ಎಂತೆಂಥಹ ಪ್ರಭಾವಿ ನಾಯಕರಿದ್ದರೂ ದೆಹಲಿ ಗದ್ದುಗೆ ಏರಲು ಸಾಧ್ಯವಾಗಲಿಲ್ಲ. ಪಿ ವಿ ನರಸಿಂಹರಾವ್ ಹಾಗೂ ದೇವೆಗೌಡರಿಗೆ ಮಾತ್ರ ಅಂತಹ ಅವಕಾಶ ದೊರೆಯಿತು, ಇದು ಅವರ ಸಾಮಥ್ರ್ಯ ಕೂಡ ಎಂದರು.
 

       ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬೇರೆಬೇರೆ ಅಭಿಪ್ರಾಯಗಳನ್ನು ಹೊಂದಿ ಚುನಾವಣೆಗಳನ್ನು ನಡೆಸಿ, ಆಡಳಿತ ಮಾಡಿರಬಹುದು. ಆದರೆ ಎರಡೂ ಪಕ್ಷಗಳಲ್ಲಿನ ಒಂದು ಸಾಮ್ಯತೆ ಎಂದರೆ ಎಲ್ಲಾ ವರ್ಗದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು. ಈ ಕಾರಣದಿಂದಾಗಿ ಈ ಚುನಾವಣೆಯಲ್ಲಿ ಈ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಾಡುವ ಜೊತೆಗೆ ರಾಜ್ಯದಲ್ಲಿರುವ ಕುಮಾರಸ್ವಾಮಿ, ಡಾ. ಪರಮೇಶ್ವರ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಸ್ಥಿರತೆ ತಂದುಕೊಂಡುವಲ್ಲಿ ಮುಖ್ಯವಾಗುತ್ತದೆ. ತುಮಕೂರಿನಲ್ಲಿ ದೇವೇಗೌಡರು ದೇಶದ ಹಿತದೃಷ್ಟಿಯಿಂದ ಗೆಲ್ಲಬೇಕು ಎಂದು ಹೇಳಿದರು.ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಹೆಚ್ ನಿಂಗಪ್ಪ, ಮುಖಂಡರಾದ ಹೊನ್ನಗಿರಿಗೌಡ, ಕೆ ಆರ್ ತಾತಯ್ಯ, ಬೆಳ್ಳಿ ಲೋಕೇಶ್, ಹಾಲನೂರು ಅನಂತಕುಮಾರ್, ಪುರುಷೋತ್ತಮ್, ಲಕ್ಷ್ಮಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link