ತಿಪಟೂರು :
ಭಾರತದಲ್ಲಿರುವ ಪ್ರೀತಿ ವಿಶ್ವಾಸ ಪ್ರಪಂಚದ ಬೇರೆಲ್ಲೂ ಇಲ್ಲ, ಬರಿ ಆರ್ಥಿಕ ಮೂಲಕ್ಕಾಗಿ ದೇಶವನ್ನು ತೊರೆಯದೇ ಇಲ್ಲಿಯೇ ಇದ್ದು ಮಾತೃಭೂಮಿಗಾಗಿ ಸೇವೆ ಸಲ್ಲಿಸಿ ಎಂದು ಐ.ಎ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಡಾ. ನಾಗಾರ್ಜುನ್.ಬಿ.ಗೌಡ ಕರೆನೀಡಿದರು.
ನಗರದ ಕಲ್ಪತರು ತಾಂತ್ರಿಕ ವಿದ್ಯಾಲಯದ ಕಲ್ಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮುಂದೆ ಗುರಿ ಇರಬೇಕು, ಹಿಂದೆ ಗುರು ಇದ್ದರೆ ಏನ್ನನಾದರೂ ಸಾಧಿಸಬುದು. ನಮ್ಮ ಗುರಿಯೇ ನಮಗೆ ಪ್ರೇರಣೆಯಾಗಿ ನಮ್ಮ ಗುರಿಯನ್ನು ತಲುಪಿಸುವಂತಿರಬೇಕೆಂದು ತಿಳಿಸಿದರು.
ತಾಲ್ಲೂಕಿನ ಐ.ಎ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ವಿವೇಕ್ ಮಾತನಾಡಿ ಪ್ರೌಢಶಿಕ್ಷಣದ ಅವಧಿಯಲ್ಲಿ ನಮಗೆ ಅಷ್ಟಾಗಿ ಏನೂ ತಿಳಿದಿರುವುದಿಲ್ಲ, ಪೋಷಕರ ಆಯ್ಕೆಯಾಗಿರುತ್ತದೆ. ಪ್ರಬುದ್ಧರಾದಂತೆ ನಮ್ಮಲ್ಲಿಯೂ ಕೂಡ ಒಂದು ಕನಸು ಚಿಗುರಿ ಆ ಕನಸನ್ನು ಬೆನ್ನೇರಿ ಗೆಲವು ಸಾಧಿಸಬೇಕು ಓದುವಾಗಲೇ ಒದು ನಿರ್ಧಿಷ್ಟ ಗುರಿಯನ್ನುಟ್ಟಿಕೊಂಡು ಪ್ರಯತ್ನಸಿದರೆ ಸಾಧನೆ ನಮ್ಮದಾಗುತ್ತದೆ ಎಂದರು.
ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ತಿಪ್ಪೇರುದ್ರಪ್ಪ ಮಾತನಾಡಿ ನಮ್ಮ ನಾಡಿಗೆ ಕೀರ್ತಿತಂದ ಹೆಮ್ಮೆಯ ಐ.ಎ.ಎಸ್ ಪರೀಕ್ಷೇಯಲ್ಲಿ ಆಯ್ಕೆಯಾಗಿರುವ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಹೆಮ್ಮೆಯಾಗುತ್ತಿದ್ದು ಇಂತವರನ್ನು ಮಾದರಿಯಾಗಿಟ್ಟುಕೊಂಡು ಸಾಧನೆಮಾಡಬೇಕೆಂದು ಬಾವುಕರಾದರು.
ಇದೇ ಸಂದರ್ಭದಲ್ಲಿ ಐ.ಎ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಡಾ. ನಾಗಾರ್ಜುನ್.ಬಿ.ಗೌಡ ಮತ್ತು ವಿವೇಕ್‍ರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಶಿವಪ್ರಸಾದ್, ರುದ್ರಮುನಿಸ್ವಾಮಿ, ಪ್ರೊ. ರಾಜ್‍ಕುಮಾರ್, ಪ್ರಾಂಶುಪಾಲರಾದ ನಂದೀಶಯ್ಯ ಮತ್ತಿರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ