ದೇಶದ ಒಳತಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು

ಚಿತ್ರದುರ್ಗ
      ಕಳೆದ 5 ವರ್ಷದಲ್ಲಿ ಕೇಂದ್ರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಆಡಳಿತ ನೀಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ  ಸರ್ಕಾರ ಮತ್ತೇ ಮುಂದಿನ 5 ವರ್ಷಗಳಲ್ಲಿ ಅಧಿಕಾರ ನಡೆಸಿದರೆ ದೇಶ ಮತ್ತಷ್ಟು ಪ್ರಗತಿಯನ್ನು ಸಾಧಿಸುವುದರಲ್ಲಿ ಅನುಮಾನ ಇಲ್ಲ ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಜೆಪಿಯ ಕಮಲದ ಗುರುತಿಗೆ ಮತವನ್ನು ನೀಡುವಂತೆ ಶಾಸಕರಾದ ಜಿ,ಎಚ್.ತಿಪ್ಪಾರೆಡ್ಡಿ ಮತದಾರರಲ್ಲಿ ಮನವಿ ಮಾಡಿದ್ದಾರೆ. 
     ಬೆಳಗಟ್ಟ, ಹಾಯ್ಕಲ್, ಬಾಗೇನಾಹಾಳ್, ಹುಣಸೇಕಟ್ಟೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಭಾನುವಾರ ಲೋಕಸಭಾ ಚುನಾವಣೆ ನಿಮಿತ್ತ ಪ್ರಚಾರ ಮಾಡಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 5 ವರ್ಷಗಳಾಗಿದೆ ಈ ಸಮಯದಲ್ಲಿ ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ಸರಿ ಮಾಡುವುದರಲ್ಲೇ ಸಮಯವಾಗಿದೆ ಮುಂದಿನ 5 ವರ್ಷ ಮತ್ತೋಮ್ಮೆ ಬಿಜೆಪಿಗೆ ಆಧಿಕಾರ ನೀಡಿ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದರೆ ದೇಶ  ಮತ್ತಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
     ಗಾಂಧಿ ಕುಟುಂಬದವರು ತಮ್ಮ ಕುಟುಂಬ ಸದಸ್ಯರಿಗೆ ಹಲವು ಸ್ಮಾರಕಗಳನ್ನು ಮಾಡಿದ್ದಾರೆ, ಆದರೆ ಸೈನ್ಯ ಕೇಳಿದ್ದ ಬುಲೆಟ್ ಪ್ರೂಫ್ ಜಾಕೆಟ್ ಸಹ ಅವರಿಗೆ ಕೊಡಲು ಸಾಧ್ಯವಾಗಿರಲಿಲ್ಲ, ಅದನ್ನು ನೀಡಲು ಬಿಜೆಪಿ ಸರ್ಕಾರವೇ ಬರಬೇಕಾಯಿತು ಕಾಂಗ್ರೆಸ್‍ಗೆ ಸಾಕಷ್ಟು ಅವಕಾಶ ಇತ್ತು ಆದರೆ ಅವರು ಅದನ್ನು ಬಳಸಿಕೊಳ್ಳಲಿಲ್ಲ, ಇಷ್ಟು ವರ್ಷ ಮಾಡಲಾಗದ ಬಡತನ ನಿವಾರಣೆಯನ್ನು ಈಗ ಮಾಡುತ್ತೇವೆ ಎನ್ನುತ್ತಿದ್ದಾರೆ ಇದನ್ನು ನೀವು ನಂಬುತ್ತೀರಾ ಎಂದು ಪ್ರಶ್ನೆ ಮಾಡಿದರು.
       ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ ಅದರಲ್ಲಿ ಫಸಲ್ ಭೀಮಾ ಯೋಜನೆ ಅತಿ ಮುಖ್ಯವಾಗಿದೆ ಮೆಳೆ ಇಲ್ಲದೆ ಬೆಳೆ ಬಾರದ ರೈತರಿಗೆ ಪರಿಹಾರವನ್ನು ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ, ಜನತೆ ಅದರಲ್ಲಿ ಬಡವರು ಏನಾದರೂ ರೋಗಕ್ಕೆ ತುತ್ತಾದರೆ ಚಿಕಿತ್ಸೆಯ ವೆಚ್ಚ ದುಬಾರಿಯಾಗಿರುವುದರಿಂದ ಚಿಕಿತ್ಸೆಯನ್ನು ಪಡೆಯುವಲ್ಲಿ ಹಿಂದೆ ಬೀಳುತ್ತಿದ್ದರು ಆದರೆ ಕೇಂದ್ರ ಸರ್ಕಾರ ಆಯುಷ್ಯ ಮಾನ್ ಭವ ಎಂಬ ಯೋಜನೆಯನ್ನು ಜಾರಿ ಮಾಡುವುದರ ಮೂಲಕ ಬಡತನ ರೇಖೆಯಲ್ಲಿರುವ ಎಲ್ಲರು ಸಹಾ ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುವಂತೆ ಮಾಡಿದ್ದಾರೆ ಇದರ ಲಾಭವನ್ನು ಪಡೆಯುವಂತೆ ಮನವಿ ಮಾಡಿದರು. 
         ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಮಕ್ಕಳಿಗೆ ಹಾಸ್ಟೆಲ್ ಸೇರಿದಂತೆ ಅನೇಕ ಸೌಭ್ಯಗಳನ್ನು ನೀಡಿ ಎಸ್.ಸಿ., ಎಸ್.ಟಿ. ಕಾಲೋನಿಗಳಲ್ಲಿ ದೇಶದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿಸಿದರು. ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಿ ಶೋಷಿತ ಸಮುದಾಯಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ ಎಂದರು. 
       ಎ.ನಾರಾಯಣಸ್ವಾಮಿ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಶೋಷಿತ ಸಮುದಾಯಗಳ ಜನರಿಗೆ ಹೆಚ್ಚಿನ ಸೌಲಭ್ಯಗಳು ದೊರೆತಿವೆ. ಅವರಿಗೆ ಮತ ನೀಡುವ ಮೂಲಕ ಅತಿಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದ ಅವರನ್ನು ಗೆಲ್ಲಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ ಎಂದು ಶಾಸಕರು ತಿಳಿಸಿದರು.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link