ದೇಸಿ ಆಟಗಳು ಮನಸ್ಸಿನ ಸದೃಢತೆಗೆ ಸಹಕಾರಿ:ಮಾಳಿಗೆ

ಚಿತ್ರದುರ್ಗ

    ನಗರದ ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆ ಚಂದ್ರವಳ್ಳಿ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಆಯೋಜಿಸಿದ್ದ ಗಾಳಿ ಪಟ ಉತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ಬಣ್ಣ,ಬಣ್ಣದ ಗಾಳಿಪಟಗಳನ್ನು ಹಾರಿಸಿ ಖುಷಿ ಪಟ್ಟರು.

     ಉತ್ಸವಕ್ಕೆ ಚಾಲನೆ ನೀಡಿದ ಡಾ.ಕರಿಯಪ್ಪ ಮಾಳಿಗೆ ಮಾತನಾಡಿ ಗಾಳಿಪಟ ಹಬ್ಬ ಗ್ರಾಮೀಣರ ಕಲೆ,ಇದು ದೇಹ,ಮನಸು ಆರೋಗ್ಯ ಹಾಗೂ ವಿದ್ಯಾರ್ಥಿ ಕೌಶಲ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ದೇಸಿ ಆಟಗಳು ದೇಹ,ಮನಸ್ಸಿನ ಸದೃಢತೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

     ಗಾಳಿಪಟ ಬದುಕಿನ ಸಂಕೇತ. ಸೂತ್ರದ ದಾರ ಹರಿದರೆ ಗಾಳಿ ಪಟ ಹಾರಾಟ ಹೇಗೆ ಹಾಳಾಗತ್ತದೆಯೊ ಹಾಗೇ ಬುದುಕಿನ ನಿಯಮ,ಶಿಸ್ತು ಎಂಬ ಸೂತ್ರ ದಾರ ಹರಿದರೆ ಬದುಕು ಕೂಡ ಬಿರುಗಾಳಿ ಸಿಲುಕುತ್ತದೆ ಎಂದು ಎಚ್ಚರಿಸಿದರು.

     ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗಪ್ಪ ಮಾತನಾಡಿ,ನಮ್ಮ ಶಾಲೆ ಭಾರತೀಯ ಸಂಸ್ಕೃತಿಗಳಿಗೆ ಒತ್ತು ಕೊಡುತ್ತಿದೆ. ಚಿತ್ರದುರ್ಗ ಸಹಿತ ಸುತ್ತ ಮುತ್ತಲ ಜಿಲ್ಲೆಗಳಲ್ಲೇ ನಮ್ಮ ಶಾಲೆ ಮೊದಲ ಬಾರಿಗೆ ಗಾಳಿಪಟ ಉತ್ಸವ ಆಯೋಜಿಸಿ ನಿರಂತರ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದೆ ಎಂದರು.

      ನಿರ್ದೇಶಕ ಡಾ.ರಾಜೀವ್‍ಲೋಚನಾ ಮಾತನಾಡಿ,ಸಂಸ್ಥೆ 46 ವರ್ಷಗಳಿಂದ ಗಾಳಿಪಟ ಉತ್ಸವವನ್ನು ಆಯೋಜಿಕೊಂಡು ಬರುತ್ತಿದೆ ಎಂದರು. ಶಿಕ್ಷಕರಾದ ಮೃಂಜಯಪ್ಪ ಸ್ವಾಗತಿಸಿ,ರಾಧಾ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap