ಹಿರಿಯೂರು :
ನಗರದ ಪಾರಿಜಾತ ಕಲ್ಯಾಣ ಮಂಟಪದ ಬಳಿ ನಿರ್ಮಿಸಿರುವ ಭವ್ಯ ದೇವಾಲಯದಲ್ಲಿ ಪಾರಿಜಾತ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯ ನಡೆಯಲಿದೆ.
ಈ ದೇವಾಲಯದ ಆವರಣದಲ್ಲಿ ಪರಿವಾರದೇವತೆಗಳಾದ ಬಲಮುರಿಮಹಾಗಣಪತಿ, ಸತ್ಯನಾರಾಯಣಸ್ವಾಮಿ, ನಾಗದೇವತೆಗಳು, ಕಾಲಭೈರವ, ಮಹಾಲಕ್ಷ್ಮೀ, ಸುಬ್ರಮಣ್ಯ, ದಂಪತಿಸಹಿತ ಆದಿತ್ಯ ನವಗ್ರಹಗಳು ಗರುಡಧ್ವಜಸ್ಥಂಭ, ಮತ್ತು ಮಹಾಗೋಪುರ ಕಳಶಸ್ಥಾಪನೆ, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಹ ನಡೆಯಲಿದೆ.
ಈ ಪ್ರತಿಷ್ಠಾಪನಾ ಕಾರ್ಯಕ್ರಮ ಇದೇ ಮೇ 29 ರಂದು ಬೆಳಿಗ್ಗೆ 4.30ರಿಂದ 5.30ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ವೇಳೆ ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಗರದ ನಾಗರೀಕರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ದೇವಸ್ಥಾನ ಸಮಿತಿ ಮುಖ್ಯಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








