ಕೊರೋನಾ ಭೀತಿ : ಎಲ್ಲಾ ರಸ್ತೆ ಬಂದ್ ಮಾಡಿದ ದೇವರಕೊಟ್ಟ ಗ್ರಾಮಸ್ಥರು

ಬೆಂಗಳೂರು

       ಕೊರೊನಾ ಭೀತಿಯಿಂದ ಹೊರಗಡೆಯಿಂದ ಬರುವವರನ್ನು ತಡೆಯಲು ಚಿತ್ರದುರ್ಗದ ಧರ್ಮಪುರ ರಸ್ತೆಯ ದೇವರಕೊಟ್ಟ ಗ್ರಾಮಸ್ಥರು ತಮ್ಮೂರಿಗೆ ಬರುವ ಎಲ್ಲಾ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಿದ್ದಾರೆ.ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೋನಾ ಹರಡಬೇಡಿ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

      ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ, ದೇವರಕೊಟ್ಟ ಗ್ರಾಮಸ್ಥರು, ಕೊರೊನಾ ಹರಡುವ ಭೀತಿಯಿಂದ, ಊರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬೇಲಿ ಹಾಕಿದ್ದಾರೆ. ಈ ಮೂಲಕ ಕೊರೊನಾ ಹರಡೋದನ್ನು ಸ್ವಯಂ ಗ್ರಾಮಸ್ಥರೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.

       ಇದಲ್ಲದೇ ಕೊರೊನಾ ಮಹಾಮಾರಿ ತಡೆಗಟ್ಟಲು ಕನಕಪುರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ಸಂಪರ್ಕ ರಸ್ತೆಗಳನ್ನು ಮುಚ್ಚಿ ಹೊರಗಿನ ಜನ ಹಳ್ಳಿ ಪ್ರವೇಶಿಸುವುದನ್ನು ಬಂದ್ ಮಾಡಿದ್ದಾರೆ.ಕುರುಬರಹಳ್ಳಿ ಗ್ರಾಮದ ಜನರು ಸಭೆ ಸೇರಿ ಗ್ರಾಮಕ್ಕೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಕ್ಕೆ ಯಾರೂ ಬರಬಾರದು, ಗ್ರಾಮದಿಂದ ಯಾರು ಹೊರಗಡೆ ಹೋಗಬಾರದು ಎಂದು ನಿರ್ಧಾರ ಕೈಗೊಂಡು ಗ್ರಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಸಿಮೆಂಟ್ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಮಾಡಿ ಕೊರೊನಾ ವೈರಸ್ ವಿರುದ್ಧ ಹೊರಾಟಕ್ಕೆ ಜೈ ಎಂದಿದ್ದಾರೆ.

     ಮಾಗಡಿ ತಾಲ್ಲೂಕಿನ ಮಾದಿಗೊಂಡನಹಳ್ಳಿ ಗ್ರಾಮದಲ್ಲೂ ಪ್ರವೇಶದ್ವಾರದಲ್ಲಿ ನೋ ಎಂಟ್ರಿ ಬೋರ್ಡ್ ನೇತುಹಾಕಿ, ಗ್ರಾಮ ಪ್ರವೇಶಿಸುವ ರಸ್ತೆಗೆ ಮುಳ್ಳನ್ನು ಹಾಕಿ ಪ್ರವೇಶ ದ್ವಾರವನ್ನ ಮುಚ್ವಿದ್ದಾರೆ. ಜನರು ಬೇರೆ ಕಡೆಯಿಂದ ಗ್ರಾಮಕ್ಕೆ ಬರುವುದನ್ನು ಹಾಗೂ ಗ್ರಾಮಸ್ಥರು ಕೂಡ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link