ಬೆಂಗಳೂರು:
ಬಿ.ಎಸ್ ಯಡಿಯೂರಪ್ಪ ಅವರ ಧಿಡೀರ್ ದೆಹಲಿ ಪ್ರಯಾಣದ ಕುರಿತಂತೆ ಮಾನಾಡಿದ ಹೆಚ್.ಡಿ ದೇವೇಗೌಡ ಅವರು, ಕುರ್ಚಿ ಮುಖ್ಯ ಆದಾಗ ರಾಜ್ಯದ ಜನ ಮುಖ್ಯ ಆಗೊಲ್ಲ ಎಂದು ಕಿಡಿಕಾರಿದ್ದಾರೆ.
ಜನರು ಕಣ್ಣಲ್ಲಿ ನೀರು ಹಾಕ್ತಿದ್ದಾರೆ ಆದರೆ ಸಿಎಂಗೆ ಅವರಿಗೆ ಬೇಕಾಗಿರೊದು ಮಾತ್ರ ತಮ್ಮ ಕುರ್ಚಿಯೊಂದೆ ಅದಕ್ಕೆ ದೆಹಲಿ ಹೋಗಿದ್ದಾರೆ ಎಂದು ಹೆಚ್.ಡಿ ದೇವೇಗೌಡ ಅವರು ಬಿ.ಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ.ಬಿಎಸ್ ಯಡಿಯೂರಪ್ಪ ಅವರು ದೆಹಲಿ ಪ್ರಯಣ ಮಾಡಿರೋದು ಅನರ್ಹ ಶಾಸಕರ ಒತ್ತಡದಿಂದ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರಲ್ಲದೇ , ಮಂಡ್ಯ ಹಾಲು ಒಕ್ಕೂಟದ ಚುನಾವಣೆ ಹಿನ್ನೆಲೆ ಮಂಡ್ಯದ ನಿರ್ದೇಶಕರೊಬ್ಬರನ್ನು ಅನರ್ಹ ಮಾಡಿಸಿದ್ದಾರೆ. ಸಿಎಂ ಯಡಿಯೂರಪ್ಪನವರು ಕೋರ್ಟ್ ಆದೇಶ ಇದ್ದರೂ ಅನರ್ಹ ಮಾಡಿದ್ದಾರೆ. ಕಾಂಗ್ರೆಸ್ನ ಸ್ನೇಹಿತರ ತೃಪ್ತಿಗೊಸ್ಕರ ಅನರ್ಹ ಮಾಡಿದ್ದಾರೆ. ದೆಹಲಿಗೆ ಹೋಗೊ ಮುಂಚೆ ಆ ಕೆಲಸ ಮಾಡಿಕೊಟ್ಟು ಹೋಗಿದ್ದಾರೆ ಎಂದು ಅವರು ಗುಡುಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ