ಬೆಂಗಳೂರು
ಯಲಹಂಕ ಮೇಲ್ಸೇತುವೆಗೆ ವಿ.ಡಿ.ಸಾವರ್ಕರ್ ಹೆಸರಿನ ಪ್ರಸ್ತಾಪಕ್ಕೆ ಬಿಜೆಪಿಗೆ ವಿರುದ್ಧವಾಗಿ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ ಹೆಸರು ಮುನ್ನೆಲೆಗೆ ಬಂದಿದೆ.ಬೆಂಗಳೂರಿನ ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿನ ಮದರ್ ಡೈರಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಮೇಲುಸೇತುವೆಗೆ ದೇವೇಗೌಡರ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಕಾಂಗ್ರೆಸ್ ಶಿಫಾರಸು ಮಾಡಿದೆ.
ದೇವೇಗೌಡರು ಕರ್ನಾಟಕದ ಹೆಮ್ಮಯ ನಾಯಕರಾಗಿದ್ದು, ದೇಶದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗರಾಗಿದ್ದಾರೆ.ಪ್ರಧಾನಿ ಪಟ್ಟವನ್ನು ಅಲಂಕರಿಸಿ ನಮ್ಮ ನಾಡಿಗೆ ಕೀರ್ತಿ ತಂದಿರುವ ದೇವೇಗೌಡರು ಭಾರತದ ಪ್ರಧಾನಮಂತ್ರಿ ಪದವಿ ಸ್ವೀಕರಿಸಿ ಜೂನ್ 1 ಕ್ಕೆ ಇಪ್ಪತೈದು ವಸಂತಗಳು ಪೂರೈಸಲಿವೆ.ಹೀಗಾಗಿ ಇದರ ಸ್ಮರಣೆಗಾಗಿ ಗೌರವ ಸೂಚಿಸಲು ಮೇಲುಸೇತುವೆಗೆ ದೇವೇಗೌಡರ ಹೆಸರು ನಾಮಕರಣ ಮಾಡುವಂತೆ ಕೆಪಿಸಿಸಿ ಕಾನೂನು ಮತ್ತು ಮಾನವಹಕ್ಕುಗಳ ಘಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಮನವಿ ಮಾಡಿದೆ.
ಕರ್ನಾಟಕ ಹಿರಿಯ ರಾಜಕೀಯ ಮುತ್ಸದ್ದಿ . ಮಣ್ಣಿನಮಗ , ಈ ನಾಡಿನ ಮುಖ್ಯಮಂತ್ರಿ , ದೇಶದ ಪ್ರಧಾನ ಮಂತ್ರಿಯಾಗಿ ಕನ್ನಡಿಗರ ಅಸ್ಮಿತೆಯನ್ನು ಭಾರತ ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದು ದೇಶ , ರಾಜ್ಯದ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ. ಹೆಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಏರಿ ಇಪ್ಪತ್ತೈದು ವರ್ಷಗಳು ಕಳೆದಿದೆ . ಅವರು ಅತ್ಯುನ್ನತ ಸ್ಥಾನಕ್ಕೆ ತಲುಪಿ ದೇಶ ಮುನ್ನಡೆಸಿದ್ದು ಕನ್ನಡಿಗರಾಗಿ ಪಕ್ಷಾತೀತ , ಸಿದ್ಧಾಂತಕ್ಕೆ ಅತೀತವಾಗಿ ನೀವು ನಮ್ಮೆಲ್ಲರಿಗೂ , ಪ್ರತಿ ಕನ್ನಡಿಗನಿಗೂ ಹೆಮ್ಮೆಯ ವಿಚಾರ , ಆ ಸಂದರ್ಭವನ್ನು ಮತ್ತೆ ಸ್ಮರಿಸುವ ಅವಕಾಶ ಬಂದಿದೆ . ಇತಿಹಾಸದಲ್ಲಿ ದಾಖಲಾದ ಕನ್ನಡಿಗ ಪ್ರಧಾನಿ ಅಧಿಕಾರ ಸ್ವೀಕರಿಸಿ 25 ವರ್ಷ ಕಳೆದಿರುವುದು ಒಂದು ಮೈಲಿಗಲಮೇಲ್ಸೇತುವೆಗೆ ಘಟಕದ ಅಧ್ಯಕ್ಷ ಧನಂಜಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ಅವರಿಗೆ ಗೌರವ ಸಲ್ಲಿಸುವ ಸಮಯ ಬಂದಿದೆ . ಈವರೆಗೂ ದೇವೇಗೌಡರ ಹೆಸರನ್ನು ಯಾವುದೇ ರಸ್ತೆ , ಕಟ್ಟಡ , ಬಸ್ , ರೈಲು , ವಿಮಾನ ನಿಲ್ದಾಣ ಸೇರಿದಂತೆ ಎಲ್ಲಿಯೂ ಇಟ್ಟಿರುವುದು ಕಂಡುಬಂದಿಲ್ಲ . ಕೆಲ ಸಂದರ್ಭಗಳಲ್ಲಿ ಅವರ ಪಕ್ಷದ ಸರ್ಕಾರ ಇದ್ದಾಗಲೂ ನಾಮಕರಣ ಮಾಡಲು ಮುಂದಾದಾಗ ಅದನ್ನು ತಿಳಿದು ಅಂತಹ ಕೆಲಸಕ್ಕೆ ಖುದ್ದು ದೇವೇಗೌಡರೇ ತಡೆ ನೀಡಿದ್ದರು. ಆದರೆ ಈಗ ಸಂದರ್ಭ ಒದಗಿ ಬಂದಿದೆ.ಹೀಗಾಗಿ ಯಲಹಂಕ ಮೇಲ್ಸೇತುವೆಗೆ ದೇವೇಗೌಡರ ಹೆಸರನ್ನು ನಾಮಕರಣ ಮಾಡಲು ಕ್ರಮಕೈಗೊಳ್ಳುವಂತೆ ಧನಂಜಯ್ ಸರ್ಕಾರಕ್ಕೆ ಮನವಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ