ಬೆಂಗಳೂರು
ರಾಜ್ಯದಲ್ಲಿ ಮೋದಿಯವರ ಅಲೆ ಜೋರಾಗಿದೆ. ಬಿಜೆಪಿ 22ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಕೋಲಾರದಲ್ಲಿ ಮುನಿಯಪ್ಪ,ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡರು ನಮ್ಮ ಅಭ್ಯರ್ಥಿಗಳ ವಿರುದ್ದ ಸೋಲುವುದು ಖಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳೊಂದಿಗೆ ಯಡಿಯೂರಪ್ಪಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತ ಮಾತನಾಡುತ್ತಿದ್ದರು.
ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿಯುವರೆಗೆ ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳು ಹಾಗೂ ಪ್ರಮುಖರು ವಿದೇಶ ಪ್ರಯಾಣ, ಪ್ರವಾಸ, ವಿವಾಹ ಹಾಗೂ ಹನಿಮೂನ್ ಗೆಂದು ತೆರಳುವಂತಿಲ್ಲ .ಎಲ್ಲರೂ ಚುನಾವಣಾ ಕೆಲಸದಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ.
ಕೆ.ಹೆಚ್.ಮುನಿಯಪ್ಪ,ಖರ್ಗೆ ಸೋಲಲಿದ್ದಾರೆ..
ದೇವೇಗೌಡರು ಸೋತರೂ ಆಶ್ಚರ್ಯ ಪಡಬೇಕಿಲ್ಲ. ಮಾಧ್ಯಮಕ್ಕೋಸ್ಕರ, ನಿಮ್ಮನ್ನು ತೃಪ್ತಿಪಡಿಸಲು ಇದನ್ನು ಹೇಳುತ್ತಿಲ್ಲ,
ಕಾಂಗ್ರೆಸ್,ಜೆಡಿಎಸ್ ಘಟಾನುಘಟಿಗಳು ಹಿನ್ನಡೆ ಅನುಭವಿಸುವುದು ನಿಶ್ಚಿತ. ಈಗಾಗಲೇ ರಾಜಕೀಯ ಗೊಂದಲಗಳು ಶುರುವಾಗಿದೆ. ಕಾಂಗ್ರೆಸ್ ,ಜೆಡಿಎಸ್ ನಲ್ಲಿ ಗೊಂದಲ ಶುರುವಾಗಿದೆ. ಫಲಿತಾಂಶದ ಬಳಿಕ ಅದು ಉಲ್ಬಣವಾಗಲಿದೆ. ಸದ್ಯ ಈಗ ಎರಡು ಉಪ ಚುನಾವಣೆ ಬಂದಿದೆ. ಕುಂದಗೋಳ್,ಚಂಚೋಳಿಯಲ್ಲಿ ನಾವು ಗೆಲ್ಲಲೇಬೇಕು. ಅಭ್ಯರ್ಥಿಗಳ ಹೆಸರು ದೆಹಲಿಗೆ ಕಳಿಸಿದ್ದೇವೆ. ಹೊರ ದೇಶಪ್ರವಾಸ, ಹನಿಮೂನು ಮತ್ತೊಂದಕ್ಕೆ ಉಪ ಚುನಾವಣೆ ನಂತರ ಹೋಗಿ. ಮೇ.23 ರ ನಂತರ ಎಲ್ಲಿ ಬೇಕಾದರೂ ಹೋಗಿ. ಉಪ ಚುನಾವಣೆವರೆಗೆ ಯಾರಿಗೂ ವಿಶ್ರಾಂತಿ ಇಲ್ಲ, ಅಭ್ಯರ್ಥಿ ಗೆಲ್ಲಿಸಿ ಎಂದು ಅವರು ಹೇಳಿದ್ದಾರೆ.