ಪುಸ್ತಕದ ಜೊತೆ ಸಂಬಂಧ ಹೆಚ್ಚಬೇಕು;ಶಿಮೂಶ

ಚಿತ್ರದುರ್ಗ :

        ಇಂದು ನಾವುಗಳು ಪುಸ್ತಕದ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇ ವೆ. ಅಪರಾಧಿಗಳ ಸಂಖ್ಯೆ ಕಡಿಮೆಯಾಗಬೇಕೆಂದರೆ ಶಾಲಾ-ಕಾಲೇಜುಗಳು ಜಾಸ್ತಿಯಾಗಬೇಕು. ಹಾಗೇ ಸಮಾಜದಲ್ಲಿ ಮೂಢನಂಬಿಕೆಗಳು, ಅನಾಗರೀಕ ವರ್ತನೆಗಳು ಕಡಿಮೆಯಾಗಬೇಕೆಂದರೆ ಗ್ರಂಥಾಲಯಗಳನ್ನು ತೆರೆಯಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

      ನಗರದ ಮುರುಘಾಮಠದ ಸಾರ್ಥಕ ಸುವರ್ಣಸೌಧದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು, ನಗರ ಕೇಂದ್ರ ಗ್ರಂಥಾಲಯ ಹಾಗು ಶ್ರೀಮುರುಘಾಮಠ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶ್ರೀಮುರುಘಾಮಠದ ನೂತನ ಶಾಖಾ ಗ್ರಂಥಾಲಯ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು

       ಮಸ್ತಕಗಳನ್ನು ಅರಳಿಸುವ ಶಕ್ತಿ ಪುಸ್ತಕಗಳಿಗಿದೆ. ಅರಳಿದ ತಲೆ ನಮ್ಮದಾಗಬೇಕು. ಕ್ಲಬ್, ಪಬ್‍ಗಳಲ್ಲಿ ಸಮಯ ಕಳೆಯದೆ ಪುಸ್ತಕಗಳನ್ನು ಓದುವುದರೊಂದಿಗೆ ಜ್ಞಾನನಿಧಿ ನಾವಾಗಬೇಕು. ಚಿಂತನೆಗಳು, ಚರ್ಚೆಗಳು ಹೆಚ್ಚಾಗಬೇಕು. ಓದುವುದು ಉತ್ತಮ ಹವ್ಯಾಸ. ಮೊಬೈಲ್‍ಗಳಿಗೆ ಮಾರುಹೋಗದೆ ಪುಸ್ತಕಗಳ ಕಡೆ ಗಮನಹರಿಸಿ ಎಂದರಲ್ಲದೆ, ಸಾರ್ವಜನಿಕರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

       ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಮಾತನಾಡುತ್ತ, ಗ್ರಂಥಾಲಯ ಎನ್ನುವುದು ಒಂದು ವಿಶ್ವವಿದ್ಯಾಲಯ ಇದ್ದಂತೆ. ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ನುಡಿದರು.ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಮುರುಘಾಮಠದಲ್ಲಿ ಹೇರಳವಾದ ಸಾಹಿತ್ಯರಾಶಿ ಇದೆ. ಬಸವಾದಿ ಪ್ರಮಥರಿಂದ ಇಲ್ಲಿಯವರೆಗಿನ ಎಲ್ಲ ಚಿಂತಕರ ಸಾಹಿತ್ಯ ಇಲ್ಲಿ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಟಿವಿ, ಮೊಬೈಲ್‍ಗಳಿಗೆ ಮಾರುಹೋಗಿದ್ದೇವೆ ಎಂದು ವಿಷಾದಿಸಿದರು.ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಪ್ರತಾಪ್ ಜೋಗಿ ಓ. ಮಾತನಾಡಿ, ಶ್ರೀಮಠಕ್ಕೆ ಬಂದುಹೋಗುವ ಜನರು ಹೆಚ್ಚು ಇದ್ದಾರೆ.

     ಹಾಗೆಯೇ ಓದುವವರು ಹೆಚ್ಚಾಗಬೇಕು ಎಂದರು.ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಗ್ರಂಥಾಲಯ ಸದಸ್ಯ ಹೆಚ್.ಲಿಂಗಪ್ಪ, ತಾರಾನಾಥ್, ಷಣ್ಮುಖಪ್ಪ, ಶಂಕರಮೂರ್ತಿ, ಗಾಯತ್ರಿ ಶಿವರಾಂ ಮೊದಲಾದವರಿದ್ದರು.ಪ್ರಾರಂಭದಲ್ಲಿ ತೋಟಪ್ಪ ಉತ್ತಂಗಿ ಪ್ರಾರ್ಥಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸಿ.ಎಂ. ಚಂದ್ರಪ್ಪ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link