ಶಿಕ್ಷಕರು ಅನುಕರಣೀಯ ವ್ಯಕ್ತಿತ್ವ ರೂಢಿಸಿಕೊಳ್ಳಿ: ಜೆಸಿಎಂ

ತುಮಕೂರು

      ಮಕ್ಕಳು ಶಿಕ್ಷಕರನ್ನು ಅನುಕರಿಸುತ್ತಾರೆ, ಹೀಗಾಗಿ ಶಿಕ್ಷಕರು ಉತ್ತಮ ನಡವಳಿಕೆ ಹೊಂದಿ ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಬೇಕಾಗಿದೆ. ಶಿಕ್ಷಕರು ಇಡುವ ತಪ್ಪು ಹೆಜ್ಜೆಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು, ಆ ತಪ್ಪು ಅವರ ಭವಿಷ್ಯಕ್ಕೂ ಮಾರಕವಾಗಬಹುದು ಎಂಬ ಎಚ್ಚರಿಕೆ ಶಿಕ್ಷಕರಲ್ಲಿರಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ. ಸಿ.ಮಾಧುಸ್ವಾಮಿ ಹೇಳಿದರು.

      ನಗರದ ಸಿದ್ಧಗಂಗಾ ಮಠದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು, ಶಿಕ್ಷಣ ಮತ್ತು ಪ್ರತಿಭೆ ಯಾರ ಸ್ವತ್ತೂ ಅಲ್ಲ ಅದನ್ನು ಅರ್ಥ ಮಾಡಿಕೊಂಡು ಬಳಸಿಕೊಂಡು ಬೆಳೆದಾಗ ವಿದ್ಯಾರ್ಥಿಗಳು ಉತ್ತಮ ಸ್ಥಾನಮಾನ ಪಡೆಯಬಹುದು ಎಂದು ಹೇಳಿದರು.

     ಮಕ್ಕಳಲ್ಲಿ ಅಗಾಧವಾದ ಶಕ್ತಿ ಇದೆ. ಅವರ ಮನಸನ್ನು ಅರಿತು ಶಿಕ್ಷರಕರು ಕಲಿಸಬೇಕು, ಮಕ್ಕಳಲ್ಲಿ ಉತ್ಸಾಹ ತುಂಬುವ ಮೂಲಕ ಅವರಲ್ಲಿ ಹೊಸದನ್ನು ಕಲಿಸಬೇಕು, ಅಸಡ್ಡೆ ಮಾಡಿದರೆ ಅವರ ಬದುಕು ಕೆಡುವುದಲ್ಲದೆ, ಸಮಾಜವೂ ಕೆಡುತ್ತದೆ ಎಂಬ ಅರಿವು ಇರಬೇಕು. ಮಕ್ಕಳ ಕನಸಿಗೆ ಬಣ್ಣ ತುಂಬಿ, ಕನಸು ಸಾಕಾರಗೊಳ್ಳಲು ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

     ಈಗಿನ ಸಾಂಪ್ರದಾಯಕ ಶಿಕ್ಷಣ ಪದ್ದತಿ ಉಪಯೋಗಕ್ಕೆ ಬರುವುದಿಲ್ಲ, ಸಿಇಟಿ, ನೀಟ್ ಪರೀಕ್ಷೆಯಲ್ಲಿ ಮಕ್ಕಳ ರ್ಯಾಂಕಿಂಗ್ ಮುಖ್ಯ. ಅಲ್ಲಿ ಯಶಸ್ಸು ಗಳಿಸಿದವರು ಮಾತ್ರ ಬುದ್ದಿವಂತರು ಎಂಬುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳ ಸಾಮಥ್ರ್ಯ ಬೆಳೆಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ಸಚಿವ ಮಾಧುಸ್ವಾಮಿ ಸಲಹೆ ಮಾಡಿದರು.

    ಮಕ್ಕಳ ಜವಾಬ್ದಾರಿಯನ್ನು ಪೂರ್ಣ ಶಿಕ್ಷಕರ ಮೇಲೆ ಬಿಡದೆ ಪೋಷಕರು ತಮ್ಮ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು, ಅವರ ಕನಸು, ಆಶಯಗಳನ್ನು ಆಲಿಸುವ, ಅದಲ್ಲಿ ಉತ್ತಮವಾದುದನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಮಕ್ಕಳ ಬುದ್ದಿ ಚುರುಕಾಗಲು ಪಠ್ಯದ ಜೊತೆಗೆ ಅವರ ಆಸಕ್ತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

   ಶಾಸಕ ಜಿ. ಬಿ. ಜ್ಯೋತಿಗಣೇಶ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ, ಇದೊಂದು ಸೇವೆ ಎನ್ನುವ ರೀತಿಯಲ್ಲಿ ಶಿಕ್ಷಕರು ಕಳಕಳಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.ಈ ವೇಳೆ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಿಸಿ ಅವರ ಸಾಧನೆ ಪ್ರಶಂಸಿಸಲಾಯಿತು. ಉತ್ತಮ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಜಿಲ್ಲಾ ಪಂಚಾಯ್ತಿ ಸದಸ್ಯ ವೈ. ಹೆಚ್. ಹುಚ್ಚಯ್ಯ, ಬಿಇಓ ರಂಗದಾಸಪ್ಪ, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ. ಬಸವಯ್ಯ, ಸಂಘದ ರಾಜ್ಯ ಕಾರ್ಯದರ್ಶಿ ವೃಷಬೇಂದ್ರ ಸ್ವಾಮಿ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಉಮೇಶ್, ಕೆ. ಎಸ್ ಸಿದ್ಧಲಿಂಗಪ್ಪ, ದೇವರಾಜಯ್ಯ, ಕೃಷ್ಣ ಮೂರ್ತಿ, ಮಂಜುನಾಥ್, ಮಾದಾಪುರ ಶಿವಪ್ಪ, ಸಂಘದ ಜಿಲ್ಲಾಧ್ಯಕ್ಷ ಕೆ. ಎಸ್ ಉಮಾಮಹೇಶ್, ಪ್ರಧಾನ ಕಾರ್ಯದರ್ಶಿ ಟಿ. ಎಂ. ರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link