ಸರ್ವರನ್ನು ಪ್ರೀತಿ ಮಾಡುವಗುಣ ಬೆಳಸಿಕೊಳ್ಳಬೇಕು-ಬಸವ ಪ್ರಭು

ಹೊಸದುರ್ಗ:

       ಸರ್ವರನ್ನು ಪ್ರೀತಿ ಮಾಡುವಗುಣ ಬೆಳಸಿಕೊಳ್ಳಬೇಕು, ಸರ್ವರಲ್ಲಿಯೂದೇವರಿದ್ದಾನೆ, ಮಾನವನ ಅಂತರಂಗದಲ್ಲಿ ದೇವರಿದ್ದಾನೆ ಎಂದು ಜಗಜ್ಜೋತಿ ಬಸವಣ್ಣನವರು ಹೇಳಿದ್ದಾರೆ ಎಂದುದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಹೇಳಿದರು.

       ಪಟ್ಟಣದ ಒಪ್ಪತ್ತಿನ ಸ್ವಾಮಿ ಮಠದಲ್ಲಿ ನಡೆದ ಶರಣ ಸಂಗಮ ಹಾಗೂ ಬಸವ ಜಯಂತಿಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಬಸವ ಜಯಂತಿ ಎಂದರೆ ಎತ್ತಿಗೆ, ಬಸವನ ಪೂಜೆ ಮಾಡಿದರೆ ಬಸವ ಜಯಂತಿ ಅನ್ನಿಸುವುದಿಲ್ಲ. ಎಲ್ಲರನ್ನೂ ಮೇಲೆತ್ತಿದ ವಿಶ್ವಗುರು ಬಸವಣ್ಣನವರ ಜಯಂತಿ ಎಂದು ತಿಳಿಸಿದರು.1913ರಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಪ್ರಾರಂಭ ಮಾಡಿರುವ ಕೀರ್ತಿ ದಾವಣಗೆರೆಯ ವಿರಕ್ತ ಮಠಕ್ಕೆ ಸಲ್ಲಿಸುತ್ತದೆ. ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಬಸವ ಪರಂಪರೆಯನ್ನು ಬೆಳೆಸಬೇಕು.ಮಾನವರೆಲ್ಲರೂ ಒಂದೇ ಎಂದು ತೋರಿಸಿ ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.

       ಪ್ರತಿಯೊಬ್ಬರ ಹೃದಯದಲ್ಲಿ ಮೇಲು-ಕೀಳು ಎಂಬ ರೋಗ ಇರಬಾರದು.ಪ್ರತಿಯೊಬ್ಬರಿಗೂ ಸಮಾನತೆಯನ್ನು ತರಲಿಕ್ಕೆ ಮದುವೆಯನ್ನು ಮಾಡಿಸಿದರು.ಅಕ್ಷಯ ತೃತೀಯಾ ದಿನವೆ ಬಸವಣ್ಣನವರ ಜಯಂತಿ ಮಾಡುವುದು ವಿಶೇಷ. ಬಸವಣ್ಣನವರ ತತ್ತವಗಳನ್ನು ಸರ್ವಕಾಲಕ್ಕೂ ತಲುಪುತ್ತವೆ. ಸೂರ್ಯ ಚಂದ್ರ ಇರುವವರೆಗೂ ಬಸವ ತತ್ವಗಳು ಅಜಾರಾಮರವಾಗಿರುತ್ತವೆ ಎಂದರು.

         ದೇವರನ್ನು ಒಲಿಸಿಕೊಳ್ಳಬೇಕಾದರೆ ತತ್ವ ಸ್ತೋತ್ರಗಳನ್ನು ಪಾಲಿಸಬೇಕು.ಬಸವ ತತ್ವದಿಂದ ಮಾನವೀಯತೆ ತಿಳಿಸುತ್ತದೆ . ಅಸಮಾನತೆಯನ್ನು ಹೋಗಲಾಡಿಸಲಗಿಷ್ಟ ಲಿಂಗ ನೀಡಿರುವಗುರು ಬಸವಣ್ಣನವರು.ಪ್ರತಿಯೊಬ್ಬರೂ ಸೋಮಾರಿಯಾಗಬಾರದು ದುಡಿಮೆಯಲ್ಲಿ ದೇವರನ್ನು ಕಾಣಬೇಕು.ಕಾಯಕವೇ ಕೈಲಾಸವೆಂಬ ಸಿದ್ದಾಂತವನ್ನು ಭೋಧಿಸಿದವರು ಬಸವಣ್ಣನವರು . ಸೋಮಾರಿಗಳಿಗೆ ಬಸವ ತತ್ವಗಳು ಉಪಯೋಗವಿಲ್ಲ.

        ಪ್ರತಿಯೊಬ್ಬರೂಬಸವ ತತ್ವಗಳನ್ನು ಪಾಲನೆ ಮಾಡುವುದರಿಂದ ಬದುಕು ಉದ್ದಾರವಾಗುತ್ತದೆ ಎಂದರು.ಇದೇ ವೇಳೆ ಅಧ್ಯಕ್ಷತೆ ವಹಿಸಿದ್ದ ಎಚ್.ಪಿ.ಜಗದೀಶ್, ಕೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಆರ್.ಹನುಂತಪ್ಪ, ಆರ್.ತಮ್ಮಣ್ಣ, ಮಾತನಾಡಿದರು. ನಿಸಾರ್ ಅಹಮದ್ ಬಸವಣ್ಣನವರ ಬಗ್ಗೆ ಉಪನ್ಯಾಸ ನೀಡಿದರು.ರಾಮಕೃಷ್ಣಪ್ಪ, ರಾಜಣ್ಣ, ಟಿ.ಬಸಪ್ಪ, ಕೆ.ಎಸ್.ಕಲ್ಮಠ್, ಹಾಜರಿದ್ದರು. ಅಮೃತ ವರ್ಷಿನಿ ಕಲಾ ತಂಡದಿಂದ ವಚನ ಗೀತೆ ಕಾರ್ಯಕ್ರಮವು ಜರುಗಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap