ತುರುವೇಕೆರೆ
ಅಭಿವೃದ್ದಿ ಕಾರ್ಯಗಳಿಗೆ ಗ್ರಾಮಸ್ಥರೆಲ್ಲರೂ ಸಹಕರಿಸಿದಾಗ ಮಾತ್ರ ಮಾದರಿ ಗ್ರಾಮವನ್ನಾಗಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.ತಾಲ್ಲೂಕಿನ ಮಾರ್ಥಮ್ಮನಹಳ್ಳಿ ಹಾಗೂ ಟಿ.ಪಾಳ್ಯ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‍ರಾಜ್ ಯೋಜನೆಯ ವಿಶೇಷ ಅನುದಾನದಲ್ಲಿ ಒಟ್ಟು 50 ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಒಂದು ಗ್ರಾಮ ಸರ್ವತೋಮುಖ ಬೆಳವಣಿಗೆ ಸಾಧಿಸಬೇಕಾದರೆ ಆ ಗ್ರಾಮದ ಜನರು ಒಮ್ಮತದ ಮನಸ್ಸಿನಿಂದ ಸಹಕರಿಸಿದಾಗ ಮಾತ್ರ ಮಾದರಿ ಗ್ರಾಮವನ್ನಾಗಿ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ, ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಅಭಿವೃದ್ದಿ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಮಾರ್ತಮ್ಮನಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆ ನಿರ್ಮಾಣಕ್ಕಾಗಿ ತಮ್ಮ ಸ್ವಂತ 7 ಗುಂಟೆಯಷ್ಟು ಜಮೀನನ್ನು ಬಿಟ್ಟು ಕೊಟ್ಟ ಇದೇ ಗ್ರಾಮದ ಜುಂಜಪ್ಪನವರನ್ನು ಸನ್ಮಾನಿಸಿದರು. ಗ್ರಾಮದ ಅಭಿವೃದ್ದಿಗೆ ಉದಾರ ನೆರವು ನೀಡಿದ ಇವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವಿ.ಬಿ.ಸುರೇಶ್, ಜಯಶೀಲ, ಮಾರ್ಥಮ್ಮನಹಳ್ಳಿ ಸ್ವಾಮಿ, ಜಗದೀಶ್, ಮಹಾಲಿಂಗಯ್ಯ, ಕಲ್ಲೇಶ್, ನಾಗರಾಜು, ನಂಜೇಶ್, ರಾಜಣ್ಣ, ಎಂ.ಬಿ.ಕಾಂತರಾಜು, ಮಂಜೇಶ್, ಮುಳಕಟ್ಟಯ್ಯ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ