ಮುಂದಿನ ದಿನಗಳಲ್ಲಿ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು

ಚಳ್ಳಕೆರೆ

       ನಗರಕ್ಕೆ ಕೇವಲ 5 ಕಿ.ಮೀ ದೂರವಿರುವ ಸೋಮಗುದ್ದು ಗ್ರಾಮ ಪಂಚಾಯಿತಿ ಕೇಂದ್ರ ಅಭಿವೃದ್ಧಿ ಪರ್ವವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಸಿ.ಎಲ್.ಸತೀಶ್‍ಬಾಬು ತಿಳಿಸಿದ್ದಾರೆ.

       ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಎಲ್ಲಾ ಸದಸ್ಯರ ಸಹಕಾರದಿಂದ ಮತ್ತು ಗ್ರಾಮದ ಹಿರಿಯರ ಅನುಗ್ರಹದಿಂದ ಅಧ್ಯಕ್ಷ ನನಗೆ ದೊರಕಿದೆ ಎಂದು ಪತ್ರಿಕೆಯೊಂದಿಗೆತಮ್ಮ ಸಂತಸವನ್ನು ಹಂಚಿಕೊಂಡ ಅಧ್ಯಕ್ಷ ಸತೀಶ್‍ಬಾಬು ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿಕೊಡಲಾಗುವುದು.

       ನನಗೆ ನನ್ನ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ನನ್ನನ್ನು ಅಧ್ಯಕ್ಷನನ್ನಾಗಿ ಮಾಡುವಲ್ಲಿ ಹೆಚ್ಚು ಶ್ರಮಿಸಿದ್ಧಾರೆ. ಅವರು ನೀಡಿರುವ ಬೆಂಬಲ ಮತ್ತು ಸಹಕಾರವನ್ನು ನಾನು ಎಂದಿಗೂ ಮರೆಯಲಾರೆ. ಎಲ್ಲರೂ ಸಹ ನನ್ನ ಮೇಲೆ ಹೆಚ್ಚು ವಿಶ್ವಾಸವಿಟ್ಟು ಈ ಸ್ಥಾನವನ್ನು ನೀಡಿದ್ಧಾರೆ. ತಾಲ್ಲೂಕಿನಲ್ಲಿಯೇ ಪ್ರಬಲವಾದ ಗ್ರಾಮ ಪಂಚಾಯಿತಿ ಕೇಂದ್ರವಾಗಿ ಸೋಮಗುದ್ದು ಬಿಂಬಿತವಾಗಿದೆ.

      ಶೀಘ್ರದಲ್ಲೇ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ಕರೆದು ಅವರವರ ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೇನೆ. ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕಾರ್ಯನಿರ್ವಹಣೆಯ ಬಗ್ಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದೇನೆ. ಪ್ರತಿಯೊಂದು ಹಂತದಲ್ಲೂ ಪಂಚಾಯಿತಿ ಅಭಿವೃದ್ಧಿ ಕಾಯ್ದೆಯನ್ನು ಉಲ್ಲಂಘಿಸದೆ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಾಗಲಿವೆ.

        ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಸಹ ನನಗೆ ಈ ಸ್ಥಾನ ದೊರಕಿಸಿಕೊಡಲು ಕಾರಣಕರ್ತರಾಗಿದ್ದು, ಅವರ ಸಲಹೆ ಮತ್ತು ಸೂಚನೆಗಳನ್ನು ತಪ್ಪದೆ ಪಾಲಿಸುವುದಾಗಿ ತಿಳಿಸಿದ್ಧಾರೆ. ಅಧ್ಯಕ್ಷ ಸ್ಥಾನ ಒಂದು ಜವಾಬ್ದಾರಿ ಸ್ಥಾನವಾಗಿದ್ದು, ಇದರ ಗೌರವವನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link