ಧರ್ಮ ಸಭೆ

ಹರಪನಹಳ್ಳಿ

       ಬಸವಣ್ಣನ ವಚನಗಳು ಅಲ್ಲದೇ ರೇಣುಕಾರ್ಚಾರ್ಯ ಸಿದ್ದಾಂತ ಶಿಕಾಮಣಿ ಸಿದ್ಧಾಂತಗಳನ್ನು ಯಾರೂ ಪಾಲಿಸುತ್ತಿಲ್ಲ ಅವರಗಳ ಹೆಸರಿನಲ್ಲಿ ವೀರಶೈವ ಸಮಾಜವನ್ನು ಒಡೆದು ಆಳುವ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾಧನೀಯ ಎಂದು ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

         ತಾಲ್ಲೂಕಿನ ಹಾರಕನಾಳು ಗ್ರಾಮದಲ್ಲಿ ಮಂಗಳವಾರ ನಡೆದ ಮಹೇಶ್ವರಸ್ವಾಮಿ ಜಾತ್ರೆ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ವೀರಶೈವ ಸಮಾಜದ ಅಖಂಡತೆಯನ್ನು ತುಂಡು ಮಾಡುತ್ತಿದ್ದಾರೆ. ಲಿಂಗಾಯಿತ ವೀರಶೈವ ಭೇದಗಳು ಹೆಚ್ಚಾಗುತ್ತಿವೆ. ಬಸವಣ್ಣ ಅವರನ್ನು ಜಾತಿಗೆ ಸೀಮಿತ ಮಾಡುವುದು ಒಳಿತಲ್ಲ. ಜಾತಿ ನಿರ್ಮೂಲನ ಮಾಡಲು ಹೋಗಿ ಅವರು ಹತ್ಯೆಯಾದರು. ಅವರ ವಚನಗಳನ್ನು ಪಾಲನೆ ಮಾಡಿದರೆ ವಿಶ್ವ ಮಾನವರಾಗುತ್ತೇವೆ ಎಂದರು.

         ಧರ್ಮಕ್ಕಾಗಿ ಕಾವಿ ತೊಟ್ಟಿರಿವವರು ನಮ್ಮಂತಹರು ಮಾತ್ರ ಸ್ವಾಮಿಗಳು. ಆದರೆ ಹಣ ರಾಜಕೀಯ ದುರುದ್ದೇಶಗಳಿಗೆ ಮಾರು ಹೋಗಿ ಖಾವಿ ತೊಟ್ಟಿರುವ ಶ್ರೀಗಳು ಸಮಾಜವನ್ನು ಸಂಘಟಿಸಲು ಸಾಧ್ಯವೇ. ದಾನ ಧರ್ಮ ಸೂಕ್ಷ್ಮ ಸಂಗತಿಗಳು. ದಾನ ಮಾಡುವ ಮನಷ್ಯನಿಗೆ ಅದರ ಸುಖ ಗೊತ್ತು. ಪ್ರಚಾರಕ್ಕೆ ಮಾಡುವುದು ದಾನವಲ್ಲ ಎಂದರು.

        ಕಾಂಗ್ರೆಸ್ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಐಕ್ಯತೆ ಸಾಧಿಸಲು ಜಾತ್ರೆ ಹಬ್ಬ ಹರಿದಿನಗಳ ಸಂಪ್ರದಾಯ ಮುಂದುವರಿಬೇಕಿದೆ. ಸುಮಂಗಳಿಯರಿಗೆ ಸಮೂಹಿಕವಾಗಿ ಉಡಿ ತುಂಬವ ಶಾಸ್ತ್ರ ಜಾತ್ರೆಗೆ ಕಳೆಕಟ್ಟಿದೆ. ಇದರೊಂದಿಗೆ ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸುವೆ ಎಂದರು.

         ಕಾಂಗ್ರೆಸ್ ಮುಖಂಡ ಎಂ.ಪಿ. ಸುಭಾಷ್ ಮಾತನಾಡಿ, ಶೋಷಣೆ ಒಳಗಾದವರನ್ನು ಮೇಲೆತ್ತುವ ಕೆಲಸವಾಗಬೇಕಿದೆ. ದೇವಸ್ಥಾನಗಳು ವ್ಯಾಪರ ಕೇಂದ್ರಗಳಾಗಿ ಮೂಡನಂಬಿಕೆಗಳ ತಾಣವಾಗುತ್ತಿವೆ. ಆದರೆ ಜಾತ್ರೆಗಳು ಎಲ್ಲಾರ ಒಗ್ಗೂಡು ವಿಕೆಯಿಂದ ಕಲ್ಮಷಗಳು ದೂರವಾಗಿ ಐಕ್ಯತೆ ಸಾರುವಲ್ಲಿ ಸಹಕಾರಿಯಾಗಿವೆ ಎಂದರು.

         ತಾಲ್ಲೂಕು ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಅಜ್ಜಣ್ಣ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ವಿನಾಶದ ಅಂಚಿಗೆ ದೂಕುತ್ತಿದ್ದಾನೆ. ಈಗಿನಿಂದಲೇ ನೀರನ್ನು ಮಿತ ಬಳಕೆ ಮಾಡಬೇಕಿದೆ. ಪ್ರತಿ ಹಳ್ಳಿಗಳಲ್ಲಿ ನಿರ್ಮಿಸಿರುವ ಟ್ಯಾಂಕ್‍ಗಳಿಂದ ಅತೀ ಹೆಚ್ಚು ನೀರು ಪೊಲಾಗುತ್ತಿದೆ.

        ಇಂದಿನಿಂದ ಅದಕ್ಕೆ ಕಡಿವಾಣ ಹಾಕಬೇಕು. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯೆ ಸುರ್ವಣ ಆರುಂಡಿ, ಹಿರಿಯ ವಕೀಲರಾದ ಗಂಗಾಧರ ಗುರುಮಠ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಟಿ.ಬಸವನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಮತ್ತಿಹಳ್ಳಿ ಅಜ್ಜಣ್ಣ, ಪ್ರಕಾಶಗೌಡ, ಕಾನಹಳ್ಳಿ ರುದ್ರಪ್ಪ, ಶಶಿಧರ ಪೂಜಾರ, ಟಿ.ಹೆಚ್.ಎಂ.ಮಲ್ಲಿಕಾರ್ಜುನ, ರಾಮೇಗೌಡ, ವಿಜಯ ದಿವಾಕರ, ಆರುಂಡಿ ನಾಗರಾಜ, ಟಿ.ಹೆಚ್.ಎಂ.ಶಿವಮೂರ್ತಿ, ರುದ್ರಪ್ಪ ಕೆಇಬಿ, ಹಾರಕನಾಳ ಕೊಟ್ರಪ್ಪ, ಸಣ್ಣ ಹಾಲೇಶಪ್ಪ, ರಾಜೇಂದ್ರ ಜಿನ್ನೂ, ಬಣಕಾರ ಹಾಗೂ ಇತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link