ಬೀದರ್
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಅವರ ಬೆಂಬಲಿಗರಿಂದ ಹಲ್ಲೆ ಯತ್ನ , ಜೀವ ಬೇದರಿಕೆ ಇದ್ದು, ರಕ್ಷಣೆ ನೀಡುವಂತೆ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಕುಮಾರ್ ಕವಡ್ಯಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಟಿಕೇಟ್ ಹಂಚಿಕೆ ವಿಚಾರದಲ್ಲಿ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಬೆಂಬಲಿಗರು ವಿಶೇಷಚೇತನರಾಗಿರುವ ತಮ್ಮ ಹಲ್ಲೆ ಯತ್ನ ನಡೆಸಿದ್ದಾರೆ. ಔರಾದ್ ಪಟ್ಟಣ ಪಂಚಾಯತಿ ಬಿ ಫಾರ್ಮ ಹಂಚಿಕೆ ವಿಚಾರದಲ್ಲಿ ‘ಬಾಯಿ ಮುಚ್ಚಕೊಂಡು ಸುಮ್ಮನಿರಬೇಕು. ಇಲ್ಲದಿದ್ದರೆ ಲಾಡ್ಜ್ ಮೇಲಿನಿಂದ ಎಸೆದು ಮುಗಿಸಿ ಬಿಡುತ್ತೇವೆ ” ಎಂದು ವಿಜಯಸಿಂಗ್ ಅವರು ತಮಗೆ ಬೆದರಿಕೆ ಹಾಕಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಹಾಗೂ ವಿಶೇಷ ಚೇತನ ರಾಗಿರುವ ನನ್ನನ್ನು ಕ್ಷೇತ್ರದಲ್ಲಿ ಮುಗಿಸಿ ಬಿಡಲು ಬೆಂಬಲಿಗರನ್ನು ಎತ್ತಿ ಕಟ್ಟಿದ್ದಾರೆ ನನಗೆ ಜೀವ ಭಯ ಇದ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ವಿಜಯ ಕುಮಾರ ಕವಡ್ಯಾಳ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ವಿಜಯಕುಮಾರ ಕವಡ್ಯಾಳ ಸುದ್ದಿಗಾರರೊಂದಿಗೆ ಮಾತನಾಡಿ,ಮೇ13 ರಂದು ನಗರದ ಸಪ್ನಾ ಕ್ಯಾಂಟೀನ್ ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶೈಲಜನಾಥ ಸಾಕೆ, ಕೆಪಿಸಿಸಿ ಕಾರ್ಯದರ್ಶಿ ಒಬೆದುಲ್ಲಾ ಶರೀಫ್ ಸಮ್ಮುಖದಲ್ಲಿ ಪಟ್ಟಣ ಪಂಚಾಯತ್ ಚುನಾವಣೆ ಸಂಬಂಧ ಸಭೆ ನಡೆದಿತ್ತು. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕವಡ್ಯಾಳ ಅವರು ಕಳೆದ ವಿಧಾನಸಭೆ ಚುವಣೆಯಲ್ಲಿ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ64232 ಮತಗಳು ಪಡೆದು ಕಡಿಮೆ ಅಂತರದಲ್ಲಿ ಪರಾಜಿತನಾಗಿದ್ದೇನೆ. ತಮಗೆ ಟಿಕೆಟ್ ನೀಡಿದಲ್ಲಿ ಕ ಮುಂದಿನ ದಿನಗಳಲ್ಲಿ ಪಕ್ಷ ಕಟ್ಟಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದು, ಇದಕ್ಕೆ ಕೆರಳಿದ ವಿಜಯಸಿಂಗ್ ಬಾಯಿ ಮುಚ್ಚಕೊಂಡ ಸುಮ್ಮನಿರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೇದರಿಕೆ ಹಾಕಿದ್ದಾರೆ ಎಂದರು.
ಈ ಘಟನೆ ನಡೆದ ಬಳಿಕ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಿಜಯಸಿಂಗ್ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮೇ 15 ರ ಮಧ್ಯರಾತ್ರಿ 1.30 ರ ಸುಮಾರಿಗೆ ತಮ್ಮ ಮೇಲೆ ಮತ್ತೊಮ್ಮ ಹಲ್ಲೆ ಯತ್ನ ಕೂಡ ನಡೆದಿದ್ದು, ಹೀಗೆ ಪದೆ ಪದೆ ಹಲ್ಲೆ ಯತ್ನ ಹಾಗೂ ರಾಜಕೀಯ ಹಗೆತನ ಸಾಧಿಸುತ್ತಿರುವ ವಿಜಯಸಿಂಗ್ ಅವರ ಹುನ್ನಾರದ ರಾಜಕೀಯದಿಂದ ಮಾನಸಿಕವಾಗಿ ನೊಂದಿರುವ ತಾವು ಎಸ್.ಪಿ ಕಚೇರಿಗೆ ಬಂದು ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಪರಿಶಿಷ್ಠ ಸಮುದಾಯದ ಹಿರಿಯ ಮುಖಂಡರಾದ ಮಾಜಿ ಸಂಸದರು ನರಸಿಂಗರಾವ್ ಸೂರ್ಯವಂಶಿ, ಮಾಜಿ ಪರಿಷತ್ ಸದಸ್ಯ ಕೆ.ಪುಂಡಲಿಕರಾವ್, ಚಂದ್ರಕಾಂತ ಹಿಪ್ಪಳಗಾಂವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಘಟನೆಯನ್ನು ಖಂಡಿಸಿದ್ದು, ವಿಜಯಕುಮಾರ ಕವಡ್ಯಾಳ ಗೆ ನ್ಯಾಯ ಸಿಗಬೇಕೆಂದು ಅವರು ಒತ್ತಾಯಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕೆ.ಎಚ್ ಮುನಿಯಪ್ಪ್ ಅವರ ಬೆಂಬಲದಿಂದ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಟಿಕೆಟ್ ಪಡೆದಿದ್ದೆ.ಇದು ಬೀದರ್ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಚ್ಚರಿಗೆ ಕಾರಣವಾಗಿದ್ದು ತಮ್ಮನ್ನು ಖರ್ಗೆ ಹಾಗೂ ಮುನಿಯಪ್ಪ ನವರ ಶಿಷ್ಯ ಎಂದು ಬಣ್ಣಿಸಲಾಗಿತ್ತು. ಆದರೆ ಔರಾದ್ ಮಿಸಲು ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಯಾಗಿ ನಿವೃತಿ ಹೊಂದಿರುವ ಭೀಮಸೇನರಾವ್ ಸಿಂಧೆ ಅವರಿಗೆ ಕೊಡುವಂತೆ ಪರಿಷತ್ ಸದಸ್ಯ ವಿಜಯಸಿಂಗ್ ವಕಾಲತ್ತು ಮಾಡಿದ್ದರು. ಹೀಗಾಗಿ ಕ್ಷೇತ್ರದಲ್ಲಿ ವಿಜಯಕುಮಾರ ಕವಡ್ಯಾಳ ಹೈ ಕಮಾಂಡ್ ನಿಂದ ಒತ್ತಡ ಹೇರಿ ಟಿಕೆಟ್ ಕೊಡಿಸಿರುವುದು ಇಲ್ಲಿನ ಪಕ್ಷದ ಆಂತರಿಕ ದ್ವೇಷಕ್ಕೆ ಕಾರಣವಾಗಿದೆ ಎಂದು ವಿಜಯಕುಮಾರ್ ಕವಡ್ಯಾಳ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








