ಉಪಸಭಾಪತಿಯಾಗಿ ಎಸ್.ಎಲ್‌.ಧರ್ಮೇಗೌಡ ಆಯ್ಕೆ

ಬೆಳಗಾವಿ
 
       ಮೇಲ್ಮನೆ ಉಪಸಭಾಪತಿಯಾಗಿ ಜೆಡಿಎಸ್ ನ ಎಸ್.ಎಲ್.ಧರ್ಮೇಗೌಡ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ಸದಸ್ಯರಾದ ಆರ್.ಚೌಡರೆಡ್ಡಿ ತೂಪಲ್ಲಿ, ಬಸವರಾಜ ಹೊರಟ್ಟಿ ಸದನಕ್ಕೆ ಧರ್ಮೇಗೌಡರ ಹೆಸರನ್ನು ಸೂಚಿಸಿ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿ ಧರ್ಮೇಗೌಡರ ಹೆಸರನ್ನು ಅನುಮೋದಿಸಿದರು. ಬಳಿಕ ನೂತನ ಉಪಸಭಾಪತಿಯವರನ್ನು ಸೂಚಕರು ಸಭಾಪತಿ ಪೀಠಕ್ಕೆ ಕರೆತಂದರು. ನೂತನ ಉಪಸಭಾಪತಿಗಳನ್ನು ಸದನದಲ್ಲಿದ್ದ ಎಲ್ಲಾ ಪಕ್ಷದ ಸದಸ್ಯರು ಪಕ್ಷಾತೀತವಾಗಿ ಅಭಿನಂದಿಸಿದರು.
       2004 ರಲ್ಲಿ ಚಿಕ್ಕಮಗಳೂರು ವಿಧಾನಸಭೆ ಶಾಸಕರು, ಜಿಲ್ಲಾ ತಾಲ್ಲೂಕು ಸ್ಥಾಯಿಸಮಿತಿ ಅಧ್ಯಕ್ಷರು, ಹುಡ್ಕೋ, ಐಪಿಎಲ್, ಸಹಕಾರ ಕ್ಷೇತ್ರಗಳ ನಿರ್ದೇಶಕಾರಾಗಿ ಸೇವೆ ಸಲ್ಲಿಸಿದ್ದು, ಆಗಸ್ಟ್ 18  2018 ರಂದು ವಿಧಾನಸಭೆಯಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು.40 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ.
       ಸಭಾನಾಯಕಿ ಜಯಮಾಲ ಸದನಕ್ಕೆ ನೂತನ ಉಪಸಭಾಪತಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.‌ಹೆಸರಿನಲ್ಲಿರುವ ಧರ್ಮದಂತೆ ಧರ್ಮದ‌ಹಾದಿಯಲ್ಲಿ ಕೆಲಸ ಮಾಡಲಿ. ಪೀಠದ ಘನತೆಯನ್ನು ಹೆಚ್ಚಿಸಲಿ ಎಂದು ಸಭಾನಾಯಕಿ ಆಶಿಸಿದರು. ಧರ್ಮೇಗೌಡರಂತೆ ತಾವು ಸಹ ಬಾಲ್ಯವನ್ನು ಚಿಕ್ಕಮಗಳೂರಿನಲ್ಲಿ ಕಳೆದಿದ್ದನ್ನು ಸ್ಮರಿಸಿದರು
       ಪ್ರತಿಪಕ್ಷ‌ ನಾಯಕ‌ ಕೋಟಾ ಶ್ರೀನಿವಾಸ ಪೂಜಾರಿ, ಧರ್ಮೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ರಾಜ್ಯಸಭೆಗೆ ಇರುವ ಗೌರವದಂತೆ ಮೇಲ್ಮನೆಗೂ ಘನತೆಯಿದೆ. ಚಿಂತಕರ ಚಾವಡಿಯಲ್ಲಿ ನೂತನ ಉಪಸಭಾಪತಿಗಳು ಉತ್ತಮವಾಗಿ ಕೆಲಸ ಮಾಡುತ್ತಾರೆ.‌
 
         ಸದನದಲ್ಲಿ ಎದುರಾಗುವ ಪ್ರಶ್ನೆಗಳನ್ನು ಸರಿಯಾಗಿ ನಿಭಾಯಿಸುತ್ತಾರೆ. ಶಾಸಕಾಂಗದ ಮೇಲೆ ಸದನ‌ ನಡೆಯುತ್ತದೆಯೇ ಹೊರತು ವ್ಯಕ್ತಿಗಳಿಂದಲ್ಲ. ಆಡಳಿತ‌ಚಕ್ರ ಸರಿಯಾಗಿ ನಡೆಸಲು ವಿರೋಧ ಪಕ್ಷ ಮುಖ್ಯ.ಹಾಗಾಗಿ ವಿಪಕ್ಷಗಳಿಗೆ ಸದನದಲ್ಲಿ ಹೆಚ್ಚು ಒತ್ತುಕೊಡಬೇಕು. ಧರ್ಮೇಗೌಡರು ‘ರಾಜಧರ್ಮದ ರಾಜಕಾರಣ’ಮಾಡಬೇಕು ಎಂದರು.
 
        ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ತಾವು ಚಿಕ್ಕಮಗಳೂರಿನ ಉಸ್ತುವಾರಿ ಸಚಿವರಾಗಿದ್ದು, ಧರ್ಮೇಗೌಡರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ. ಚಿಕ್ಕಮಗಳೂರಿಗೆ ಸಚಿವ ಸ್ಥಾನ ನೀಡಿಲ್ಲ. ಈಗ ಧರ್ಮೇಗೌಡರು ಉಪಸಭಾಪತಿಗಳಾಗಿದ್ದು, ಜಿಲ್ಲೆಗೆ ಸಂತಸ ತಂದಿದೆ ಎಂದರು. ಧರ್ಮೇಗೌಡರು ಸೌಮ್ಯ ಸ್ವಭಾವದವರಾದರೆ ಅವರ ಸಹೋದರ ಭೋಜೇಗೌಡ ದೊಡ್ಡ ಮಾತುಗಾರ . ಇವರಿಬ್ಬರಂತವರು ರಾಜಕಾರಣಲ್ಲಿರಬೇಕು ಎಂದರು.ಚಿಕ್ಕಮಗಳೂರಿನ ಉಸ್ತುವಾರಿ ಸಚಿವರಿಗೆ ಇವರಿಬ್ಬರ ಗಾಳಿ ಬೀಸಿರಬಹುದು ಎಂದಾಗ, ಇದಕ್ಕೆ ಸಚಿವ ಕೆ.ಜೆ.ಜಾರ್ಜ್ ಸಮ್ಮತಿ ಸೂಚಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap