ತುರುವೇಕೆರೆ:
ತಾಲ್ಲೂಕಿನ ದಂಡಿನಶಿವರದ ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್. ಪಿ. ಶಿವಾನಂದಯ್ಯನವರು ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‍ನ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಈ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಸ್ಕ್ವಾಡ್‍ನ ಮುಖ್ಯಸ್ಥರಾಗಿ, ಮೌಲ್ಯಮಾಪನಾ ಕಸ್ಟೋಡಿಯನ್ ಆಗಿ, ರಾಜ್ಯಶಾಸ್ತ್ರ ವಿಷಯದ ಬೋರ್ಡ್ ಆಫ್ ಎಗ್ಸಾಮಿನೇಶನ್ (ಬಿಒಇ) ನ ಸದಸ್ಯ ಹಾಗೂ ಮುಖ್ಯಸ್ಥರಾಗಿ, ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್) ನ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಕರ ಸಂಘದ ತುಮಕೂರು ವಲಯ ಕಾರ್ಯದರ್ಶಿಯಾಗಿದ್ದರಲ್ಲದೆ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಕಳೆದ 23 ವರ್ಷಗಳಿಂದÀ ಸೇವೆ ಸಲ್ಲಿಸಿದ್ದಾರೆ. ಇವರು ಸದ್ಯ ದಂಡಿನಶಿವರ ಸ.ಪ್ರ.ದ.ಕಾಲೇಜು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರ ಪರಿಶ್ರಮದಿಂದಾಗಿ ದಂಡಿನಶಿವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‍ನಿಂದ ‘ಬಿ’ ಮಾನ್ಯತೆ ಪಡೆದಿದೆ ಹಾಗೂ ಯುಜಿಸಿಯ 12 ಬಿ ಮತ್ತು 2 ಎಫ್ ಅಧಿನಿಯಮಗಳಡಿಯಲ್ಲಿ ಗುರುತಿಸುಕೊಳ್ಳುವಲ್ಲಿ ಸಫಲಗೊಂಡಿದೆ.
ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿರುವ ಶಿವಾನಂದಯ್ಯನವರನ್ನು ಕಾಲೇಜು ಸಲಹಾ ಸಮಿತಿಯ (ಸಿಡಿಸಿ) ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಕಾಲೇಜಿನ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ದಂಡಿನಶಿವರ ಗ್ರಾಮಸ್ಥರು ಅಭಿನಂದಿಸಿದ್ದಾರೆ.