ಚಿತ್ರದುರ್ಗ
ಬಹುಸಂಸ್ಕೃತಿಯ ಭಾರತದಲ್ಲಿರಾಜಕೀಯಕಾರಣಕ್ಕೆಜಾತಿ, ಧರ್ಮದ ಸಂಘರ್ಷ, ದ್ವೇಷ, ಅಸಹಿಷ್ಣತೆಗಳು ನಡೆಯುತ್ತಿದೆಎಂದು ಹಾಲೆಂಡ್‍ದೇಶದ ಮೆನ್ಸನ್ ಮೆಂಟ್‍ಇನ್ ಮಿಸ್ಸಿ ಸಂಸ್ಥೆಯ ಭಾರತ ಪ್ರತಿನಿಧಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರಕಿಸ್ ಸಿಲ್ಡರ್ ಅಭಿಪ್ರಾಯಪಟ್ಟರು.
ಶ್ರೀ ಭೋವಿ ಗುರುಪೀಠದಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಮಠದಲ್ಲಿಏರ್ಪಡಿಸಲಾಗಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತದಲ್ಲಿಇತ್ತೀಚಿನ ದಿನಮಾನದಲ್ಲಿರಾಜಕೀಯ ಉದ್ದೇಶಗಳಿಗಾಗಿ ಜಾತಿ, ಧರ್ಮ, ಜನಾಂಗೀಯ ದ್ವೇಷಗಳು ಹೆಚ್ಚುತ್ತಿದ್ದು, ಹಿಂಸೆ, ದ್ವೇಷ ಘರ್ಷಣೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆಎಂದರು.
ದ್ವೇಷ, ಹಿಂಸೆ, ಅಸೂಯೆಗಳಿಂದ ದೇಶದ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಜಗತ್ತಿನ ನಾನಾ ರಾಷ್ಟ್ರಗಳು ಶಾಂತಿ ಮತ್ತು ಸೌರ್ಹಾದತೆಯ ನೆಲೆಗಟ್ಟಿನಲ್ಲಿಒಂದಾಗುವಂತಹ ಚರ್ಚೆಗಳನ್ನು ಆರಂಭಮಾಡಿದ್ದು, ಅಂತಹ ಪ್ರಮುಖ ವಿಷಯಗಳ ಜೊತೆಗೆ ಭಾರತವುಕೈಜೋಡಿಸಬೇಕಾದಅಗತ್ಯವಿದೆಎಂದರು.
ಬುದ್ಧ, ಬಸವಣ್ಣ, ಅಂಬೇಡ್ಕರ್‍ರಂತಹ ಸಾಮಾಜಿಕ ಸಮಾನತೆಯನ್ನು ಬಯಸಿದಂತಹ ಮಹಾನ್‍ಚಿಂತಕರುಆಗಿಹೋದ ಭಾರತ ಭೂಮಿಯಲ್ಲಿ ಶಾಂತಿ ಮತ್ತು ಸೌರ್ಹಾಧತೆಗಾಗಿ ಹೋರಾಟಗಳನ್ನು ನಡೆಸಬೇಕಾದ ಪರಿಸ್ಥಿತಿ ಉಂಟಾಗಿರುವುದು ವಿಷಾದಕರಎಂದರು.
ಬುದ್ಧ ಪ್ರೇಮ, ಅಮರತ್ವ, ಸೌರ್ಹಾಧತೆಯನ್ನು ಸಾರಿದ್ದು, ಆ ನಿಟ್ಟಿನಲ್ಲಿ ಭಾರತ ಬಹುತ್ವ, ಬಹುಸಂಸ್ಕತಿಗಳನ್ನು ಮೈಗೂಡಿಸಿಕೊಂಡು ಸಾವಿರಾರುವರ್ಷಗಳಿಂದ ಜಾತಿ, ಧರ್ಮಗಳಿಗೆ ಹೆಚ್ಚು ಒತ್ತು ನೀಡದೇ, ಭಾತೃತ್ವದಿಂದ ಬದುಕಿರುವುದುಚರಿತ್ರೆಯಿಂದ ಕಂಡುಕೊಳ್ಳಬಹುದು.
ಮಾನವ ಹಕ್ಕು ಹೋರಾಟಗಾರನಾಗಿಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪ್ರಯಾಣ ಮಾಡಿರುವ ನಾನು ಹಲವು ದೇಶಗಳ ಧಾರ್ಮಿಕ, ಸಾಮಾಜಿಕ ಮತ್ತುಜಾತಿ ವ್ಯವಸ್ಥೆಯನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಹಲವು ದೇಶಗಳ ಪರಿಸ್ಥಿತಿಗೂ ಈಗ ಹಾಲಿ ಭಾರತದ ಪರಿಸ್ಥಿತಿಗೂ ಭಿನ್ನವಾಗಿದೆ.ಯಾವದೇಶದಲ್ಲಿ ಶಾಂತಿ, ಸಮಾನತೆ, ಸಹಬಾಳ್ವೆ, ಸೌರ್ಹಾಧತೆಇದೆಎಂದು ಭಾವಿಸಿದ್ದೇವೊ ಅಂತಹ ದೇಶ ಇಂದು ರಾಜಕೀಯ ಅಧಿಕಾರದ ಕಾರಣಗಳಿಗಾಗಿ ಜಾತಿ ಮತ್ತುಧರ್ಮದ ಹೆಸರಿನಲ್ಲಿ ಸಂಘರ್ಷಏರ್ಪಾಡಾಗುವ ಮೂಲಕ ಅಶಾಂತಿಗೆ ಕಾರಣವಾಗಿರುವುದು ಜಾಗತೀಕ ಮಟ್ಟದಲ್ಲಿಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಕಿಸ್‍ಸಿಲ್ಡರ್ ಅಭಿಪ್ರಾಯಪಟ್ಟರು.
ಜಗತ್ತಿನಎಲ್ಲಾ ದೇಶಗಳು ಜನಾಂಗೀಯ ಹೆಸರಿನಲ್ಲಿ ನಡೆಯುತ್ತಿರುವಮಾನವ ಹಕ್ಕುಗಳು ಉಲ್ಲಂಘನೆಕುರಿತು ಮಾತನಾಡುವಂತಾಗಿದೆ. ಆದರೆ ಭಾರತದಲ್ಲಿಇಂದೂ ಸಹ ಜಾತಿ ಮತ್ತುಧರ್ಮದ ಹೆಸರಿನಲ್ಲಿ ಸಂಘರ್ಷಗಳು ಏರ್ಪಾಡಾಗುತ್ತಿರುವುದುಆತಂಕಕಾರಿ ಬೆಳವಣಿಗೆ ಎಂದರು.ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿರುವುದು ಮೇಲ್ನೋಟಕ್ಕೆಕಾಣಬರುತ್ತಿದೆಎಂದರು.
ಮೆನ್ಸನ್ ಮೆಂಟ್‍ಇನ್ ಮಿಸ್ಸಿ ಸಂಸ್ಥೆಯದಕ್ಷಿಣ ಭಾರತದ ಪ್ರತಿನಿಧಿ ಕ್ರಿಸ್ಟ್‍ಅಂಬ್ರೋಸ್‍ಅವರು ಮಾತನಾಡಿದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇಜಾತಿ, ಧರ್ಮದ ಸಂಘರ್ಷಗಳನ್ನು ಕೊನೆಗಾಣಿಸುವಂತಹ ಸಾಮಾಜಿಕ ಚಳುವಳಿಗಳು ನಡೆದವು.ಆ ಚಳುವಳಿಗಳ ಮುಖ್ಯಸ್ಥರು ತಮಿಳುನಾಡಿನ ತಂದೆ ಪೆರಿಯಾರ್‍ರಾಮಸ್ವಾಮಿ ನಾಯ್ಕರ್, ಕೇರಳದಲ್ಲಿ ನಾರಾಯಣಗುರು, ಮಹರಾಷ್ಟ್ರದಲ್ಲಿ ಡಾ.ಬಾಬಾ ಸಾಹೇಬ್‍ಅಂಬೇಡ್ಕರ್ ಸಾಮಾಜಿಕ ಚಳುವಳಿಗೆ ಭದ್ರ ಬುನಾದಿಯನ್ನು ಹಾಕಿದವರು.ಹಾಗೆ ಕರ್ನಾಟಕದಲ್ಲೂ 12ನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗಾಯಿತಧರ್ಮ ಸ್ಥಾಪನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದವರು.ಇಂತಹ ಮಹಾನ್ ನಾಯಕರು ಹುಟ್ಟಿ ಬೆಳೆ ನಾಡಲ್ಲಿಜಾತಿ, ಧರ್ಮ ಸಂಘರ್ಷಗಳು ಮನುಷ್ಯನನ್ನುಕುಬ್ಜನನ್ನಾಗಿ ಮಾಡುತ್ತಿವೆಎಂದು ಹೇಳಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಜಾತಿ ಮತ್ತುಧರ್ಮದ ಸಂಘರ್ಷಕ್ಕೆಅಂತ್ಯ ಹಾಡುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯುತ್ತಿವೆ. 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಚಳುವಳಿಯ ತಳಹದಿ ಮತ್ತು ವಿಚಾರಧಾರೆಯಮೇಲೆ ಸ್ಥಾಪನೆಗೊಂಡಂತಹ ತಳ ಸಮುದಾಯದ ಮಠ ಮಾನ್ಯಗಳೆಲ್ಲವೂ ನಿರಂತರವಾಗಿ ಸಾಮಾಜಿಕಐಕ್ಯತೆಗಾಗಿ ಶ್ರಮಿಸುತ್ತಿದ್ದು, ಆ ನಿಟ್ಟಿನಲ್ಲಿಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಮಠವು ಮುಂಚೂಣಿಯಲ್ಲಿದ್ದು, ಹಲವು ಸಾಮಾಜಿಕ ಸಮಸ್ಯೆಗಳನ್ನು ಸಾಮರಸ್ಯದಿಂದ ನಿಭಾಯಿಸುತ್ತಿದೆಎಂದು ಸ್ವಾಮೀಜಿಯವರುಅಭಿಪ್ರಾಯಪಟ್ಟರು.
ಸಂವಾದ ಗೋಷ್ಠಿಯಲ್ಲಿಚಿತ್ರದುರ್ಗಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಹೆಚ್.ಲಕ್ಷ್ಮಣ್, ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದರಾಜ್ಯಕಾರ್ಯಕಾರಿ ಸಮಿತಿಯ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್, ಭೋವಿ ಗುರುಪೀಠದ ಸಿ.ಇ.ಓ. ಗೌನಹಳ್ಳಿ ಗೋವಿಂದಪ್ಪ, ವಿಮುಕ್ತಿ ವಿದ್ಯಾಸಂಸ್ಥೆಯದಮ್ಮಾಕೇಂದ್ರದ ನಿರ್ದೇಶಕರಾದಆರ್. ವಿಶ್ವಸಾಗರ್, ಪತ್ರಕರ್ತಪ್ರದೀಪ್ ಕಡಕೊಳ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
