ಭಿಕ್ಷಾಟನೆ ಮೂಲಕ ವಿನೂತನ ಪ್ರತಿಭಟನೆ

ಚಿತ್ರದುರ್ಗ:

     ಬರಪೀಡಿತ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲಂತೆ ಬರಪ್ಪೋ ಬರ್ರಿ ಭಿಕ್ಷೆ ಹಾಕಿ ಎಂದು ಬೊಬ್ಬೆ ಹೊಡೆಯುತ್ತ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಂಗಳವಾರ ಗಾಂಧಿವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಭಿಕ್ಷಾಟನೆ ಮಾಡಿ 1886 ರೂ.ಗಳ ಪೋಸ್ಟಲ್ ಆರ್ಡರನ್ನು ರಾಜ್ಯದ ಮುಖ್ಯಮಂತ್ರಿ ನಿಧಿಗೆ ಸಲ್ಲಿಸಿದರು.

     2013 ರಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸುಮಾರು ಹದಿಮೂರು ಎಕರೆ ಮೂರು ಗುಂಟೆ ಪ್ರದೇಶವನ್ನು ಜಿಲ್ಲಾಸ್ಪತ್ರೆ ಹಿಂಭಾಗ ಮೀಸಲಿರಿಸಿದೆ. ಹಣ ಬಿಡುಗಡೆಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿರುವ ಬಿಜೆಪಿ.ಸರ್ಕಾರದ ವಿರುದ್ದ ಅನೇಕ ಹೋರಾಟಗಳನ್ನು ಮಾಡಿದ್ದು, ಅಂತಿಮವಾಗಿ ಭಿಕ್ಷಾಟನೆಗೆ ಮುಂದಾಗಿದ್ದೇವೆ.

    ಮುಂದೆ ಕಾಲೇಜು ಕಟ್ಟಡ ನಿರ್ಮಾಣ ಸಂದರ್ಭದಲ್ಲಿಯೂ ಜನತೆಯಿಂದ ಭಿಕ್ಷೆ ಎತ್ತಿ ಸರ್ಕಾರಕ್ಕೆ ನೀಡುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ಅನಿಲ್, ಉಪಾಧ್ಯಕ್ಷ ಹರೀಶ್, ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಧನರಾಜ್, ನಗರ ಘಟಕದ ಉಪಾಧ್ಯಕ್ಷ ಓಬಳೇಶ್, ಚೌಡೇಶ್, ಎಂ.ಮಂಜುನಾಥ್, ರವಿ, ಬಿ.ಶಿವರಾಜ್, ಕರುಣಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link