ಚಿತ್ರದುರ್ಗ;
ದೈಹಿಕವಾಗಿ ನೀವುಗಳು ವಿಕಲಚೇತನರಾಗಿರಬಹುದು ಆದರೆ ಮಾನಸಿಕವಾಗಿ ನೀಮ್ಮಲ್ಲಿ ಸಾಮಾನ್ಯರಿಗಿಂತ ವಿಶೇಷವಾದ ಶಕ್ತಿಯಿದೆ. ಪ್ರತಿಭೆಯೂ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಬಾರೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕಣ ಸಬಲಿಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.3 ರಂದು ನಡೆಯಲಿರುವ ವಿಶ್ವವಿಕಲಚೇತನ ದಿನಾಚರಣೆಯ ಅಂಗವಾಗಿ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಕಲಚೇತನರ ಕ್ರೀಡಾ ಮತ್ತು ಸಂಸ್ಕತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೀವುಗಳು ದೈಹಿಕವಾಗಿ ಮಾತ್ರ ಅಂಗವಿಕಲರಾಗಿದ್ದೀರಾ ಅದರೆ ಮಾನಸಿಕವಾಗಿ ಬೇರೆಯವರಿಗಿಂತ ವಿಶೇಷವಾದ ಗುಣ ನಿಮ್ಮಲ್ಲಿ ಇದೆ ಆದನ್ನು ಇಂತಹ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಬೇಕಿದೆ, ಇಂತಹ ಮಕ್ಕಳ ಪೋಷಕರು, ಶಿಕ್ಷಕರಾದವರು ಸಹಾ ವಿಕಲಚೇತನ ಮಕ್ಕಳಲ್ಲಿರುವ ವಿಶೇಷವಾದ ಗುಣವನ್ನು ಗುರುತಿಸುವುದರ ಮೂಲಕ ಅದಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕರೆ ನೀಡಿದರು.
ನಾವು ಬೇರೆಯವರಂತೆ ಇಲ್ಲ ನಮ್ಮಿಂದ ಏನು ಸಾಧ್ಯವಿಲ್ಲ ಎಂಬ ಕೀಳಿರಿಮೆಯನ್ನು ಬಿಡಿ ನೀವುಗಳು ವಿಕಲಚೇತನರಾದರೂ ಸಹಾ ನಿಮ್ಮಗೆ ದೇವರು ಯಾವುದರಲ್ಲೂ ಕಡಿಮೆ ಮಾಡಿಲ್ಲ ಬೇರೆಯವರಿಗಿಂತ ವಿಶೇಷವಾದ ಶಕ್ತಿಯನ್ನು ನೀಡಿದ್ಧಾನೆ, ಹಾಡು, ಸಂಗೀತ, ಚಿತ್ರಕಲೆ, ಬುದ್ದಿವಂತಿಕೆ, ಕ್ರೀಡೆ, ಗುರುತಿಸುವಿಕೆ ಸೇರಿದಂತೆ ಇತರೆ ವಿಶೇಷವಾದ ಗುಣಗಳು ಇವೆ ಅದರ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿ ಹೇಳಿದರು.
ಪ್ರಬೋಷನರಿ ಜಿಲ್ಲಾಧಿಕಾರಿ ನಂದಿನಿ ಮಾತನಾಡಿ, ವಿಕಲಚೇತನರಾದ ಹಲವಾರು ಜನ ವಿವಿಧ ರೀತಿಯ ಸಾಧನೆ ಮಾಡಿದ್ದಾರೆ ಅವರನ್ನು ಮಾದರಿಯನ್ನಾಗಿ ಇಟ್ಟುಕೊಂಡು ಸಾಧನೆಯನ್ನು ಮಾಡಿ, ಸರ್ಕಾರವೂ ಸಹಾ ನಿಮ್ಮ ಸಾಧನೆಗೆ ಸಹಾಯವನ್ನು ಮಾಡುತ್ತಿದೆ ಅದರ ಪ್ರಯೋಜನ ಪಡೆಯಿರಿ ಎಂದು ಕಿವಿ ಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ ಉಪ ನಿರ್ದೇಶಕರಾದ ರಾಜಾನಾಯ್ಕ ಮಾತನಾಡಿ, ಸಾಧನೆ ಎಂಬುದು ಯಾರ ಸೋತ್ತು ಅಲ್ಲ ಅದು ಸಾಧಕರ ಸೋತ್ತಾಗಿದೆ ಯಾರು ಸಾಧನೆ ಮಾಡುತ್ತಾರೋ ಅವರಿಗೆ ಮಾತ್ರ ಒಲಿಯುತ್ತದೆ ಇಲ್ಲಿ ದೈಹಿಕ ವಿಕಲ ಚೇತರು ಸಾಮಾನ್ಯ ಎಂಬ ಬೇಧ ಇರುವುದಿಲ್ಲ ಎಂದರು.
ಪ್ರಪಂಚದಲ್ಲಿ ವಿಕಲಚೇತನರು ಸಹಾ ವಿವಿಧ ರೀತಿಯ ಸಾಧನೆಯನ್ನು ಮಾಡಿದ್ಧಾರೆ, ಮುಂಚೆ ಚನ್ನಾಗಿ ಇದ್ದು ನಂತರ ವಿಕಲಚೇತನರಾದವರು ಸಹಾ ಸಾಧನೆಯನ್ನು ಮಾಡಿದ್ಧಾರೆ ಇಂತಹರು ನಿಮಗೆ ಮಾದರಿಯಾಗಬೇಕಿದೆ ಎಂದು ರಾಜಾನಾಯ್ಕ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆಯ ವೆಂಕಟಲಕ್ಷ್ಮಿ, ನಿವೃತ್ತ ದೈಹಿಕ ಶಿಕ್ಷಕ ಜಯಣ್ಣ ಭಾಗವಹಿಸಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕಣ ಸಬಲಿಕರಣ ಇಲಾಖೆಯ ಜಿಲ್ಲಾ ವಿಕಲಚೇತನ ಕಲ್ಯಾಣಿಧಿಕಾರಿ ವೈಶಾಲಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವಿಕಲ ಚೇತನ ಮಕ್ಕಳು ಮತ್ತು ಹಿರಿಯ ನಾಗರೀಕರು ವಿವಿಧ ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.