ನೀರಿನ ಸಮಸ್ಯೆಗೆ ಬೋರ್ ವೆಲ್ ಕೊರೆಸಿ :ವೆಂಕಟರಮಣಪ್ಪ

ಪಾವಗಡ :

     ಶುದ್ದಕುಡಿಯುವ ನೀರಿನ ಸಮಸ್ಯೆ ಎದುರಾದ ಗ್ರಾಮಗಳಲ್ಲಿ ಕೂಡಲೇ ಕೋಳವೆ ಬಾವಿಗಳನ್ನು ಕೋರೆಸಿ ಹಾಗೂ ತಿರುಮಣೆ ಸೋಲಾರ್ ಪಾರ್ಕ್ ಸುತ್ತಲಿನ ಗ್ರಾಮಗಳಲ್ಲಿ ಕೈಗೋಳ್ಳಬಹುದಾದ ಅಭಿವೃದ್ದಿ ಕಾಮಗಾರಿಗಳಿಗೆ ಇರುವ ತೋಡಕುಗಳನ್ನು ನಿವಾರಣೆ ಮಾಡುತ್ತೆನೆಂದು ಮಾಜಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.

     ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಸೂಲನಾಯಕನಹಳ್ಳಿ ಹಾಗೂ ಹೋಸದುರ್ಗ ಗ್ರಾಮಗಳಲ್ಲಿ ಶುದ್ದಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಕೋಳವೆ ಬಾವಿ ಕೋರೆಸಿ ಹಾಗೂ ಶುದ್ದಕುಡಿಯುವ ನೀರಿನ ಘಟಕಗಳನ್ನು ತೆರೆಯುವ ವೇಳೆ ಸರ್ಕಾರ ಪ್ರತಿಘಟಕಕಕ್ಕೆ ನಿರ್ವಹಣೆಯ ಹಣ ತೆಗೆಯಬೇಕಿತ್ತು,

    ಆಕೇಲಸ ಮಾಡದ ಕಾರಣ ಇಂದು ತಾಲೂಕಿನ ಹಲವು ಘಟಕಗಳು ದುರಸ್ಥಿಗೆ ಸಿಲುಕಿ ಜನತೆಗೆ ಪ್ಲೋರೈಡ್ ರಹಿತ ನೀರು ಸಿಗುತ್ತಿಲ್ಲ ಕೂಡಲೇ ಎಲ್ಲಾ ಘಟಕಗಳನ್ನು ಗ್ರಾಪಂಗಳಿಗೆ ಆಸ್ಥಾಂತರ ಮಾಡಿ ಕಾರ್ಯನಿರ್ವಹಿಸಲು ಆಗತ್ಯ ಕ್ರಮ ಕೈಗೋಳ್ಳಬೇಕೆಂದು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ನಾಗರಾಜುರವರಿಗೆ ಸೂಚಿಸಿದರು.

     ತಿರುಮಣೆಯ ಸೌರವಿದ್ಯುತ್ ಘಟಕದ ಸಿಎಸ್‍ಆರ್ ಹಣದಲ್ಲಿ ರಸ್ತೆ,ಬೀದಿದ್ವೀಪ,ಶಾಲಾಕಟ್ಟಡಗಳು,ಚರಂಡಿ,ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕಾಮಾಗಾರಿಗಳನ್ನು ನಡೆಸಲು ಕ್ರೀಯಾಯೋಜನೆ ಸಿದ್ದಗೊಂಡಿದ್ದು ವಳ್ಳೂರು ಶಾಲೆ ದುರಸ್ಥಿಗೋಳಿಸಲು ಜಿಲ್ಲಾಧಿಕಾರಿಗಳಿಗೆ ಹೇಳಿ ಇರುವ ತಾಂತ್ರಿಕ ತೋಡಕುಗಳನ್ನು ಬಗೆಹರಿಸುತ್ತೆನೆಂದು ಶಾಸಕರು ತಿಳಿಸಿದರು.

      ತಾಪಂ ಅದ್ಯಕ್ಷರಾದ ಸೊಗುಡುವೆಂಕಟೇಶ್ ಮಾತನಾಡಿ, ಅದ್ಯಕ್ಷನಾಗಿ ನಾವು ಸೂಚಿಸಿದರು ಅಗತ್ಯತೆ ಇರುವ ಕಡೆ ಕೋಳವೆ ಬಾವಿಗಳನ್ನು ಕೋರೆದಿಲ್ಲ, ನರೇಗದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಗಳು ನಡೆದಿಲ್ಲ, ನರೇಗ ಚೀಟಿ ವಿತರಣೆ ಪೂರಕವಾಗಿಲ್ಲ, ಅರ್ಹರಿಗೆ ಗ್ರಾಪಂಗಳ ಸೌಲಭ್ಯವಿಲ್ಲ, ಸಿಎಸ್‍ಆರ್ ಹಣ ಖಾಸಗಿ ಸೋಲಾರ್ ಘಟಕಗಗಳಲ್ಲಿ ತೆಗೆದಿದ್ದು ಅದರ ಸದುಪಯೋಗ ಪಡೆಯುವ ಬಗ್ಗೆ ಶಾಸಕರ ಗಮನಕ್ಕೆ ತಂದರು, ವಿವಿಧ ಇಲಾಖಾಧಿಕಾರಿಗಳು ಯಾವುದೇ ಮಾಹಿತಿ ಕೇಳಿದರು ಸಕಾಲದಲ್ಲಿ ನೀಡುತ್ತಿಲ್ಲ ಹಿಗಾದರೆ ತಾಲೂಕು ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪ್ರತಿಯೋಬ್ಬರು ಕಾಣುವುದಾದರು ಹೇಗೆ ಎಂದು ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

        ಸೌರ ವಿದ್ಯುತ್ ಘಟಕದ ಎಜಿಎಂ ಪ್ರಕಾಶ್ ಮಾತನಾಡಿ ನಾಗಲಮಡಿಕೆ,ಬಳ್ಳಸಮುದ್ರ, ಕ್ಯಾತಗಾನಚೆರುರ್ಲು, ತಾಟೀಕುಂಟೆ,ಕೆರೆಗಳಲ್ಲಿ ಹೂಳೆತ್ತುವುದಕ್ಕೆ ಕ್ರೀಯಾಯೋಜನೆ ಸಿದ್ದವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಪಿಡಬ್ಲ್ಯು ಡಿ ಇಲಾಖೆಯ ಎಇಇ ವಿಜಯ್ ಕುಮಾರ್ ಮಾತನಾಡಿ ತಿರುಮಣೆ ಗ್ರಾಮದಲ್ಲಿನ ಮುಖ್ಯರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಸಲು 1.80ಕೋಟಿ ವ್ಯಚ್ಚದಲ್ಲಿ ಕ್ರೀಯಾಯೋಜನೆ ಸಿದ್ದಪಡಿಸಿ ಕಾಮಗಾರಿ ಕೈಗೋಳ್ಳಲಾಗುವುದೆಂದರು.

     ತಿರುಮಣೆ ಸೌರವಿದ್ಯುತ್ ಘಟಕದಲ್ಲಿ ಸ್ಥಳಿಯರಿಗೆ ಉದ್ಯೋಗಾವಕಾಶ ನೀಡದೇ ಸಮೀಪದಲ್ಲಿನ ಆಂದ್ರಪ್ರದೇಶ ನೌಕರರಿಗೆ ಆದ್ಯತೆ ನೀಡುತ್ತಿದ್ದು, ನಮಗೆ ಆನ್ಯಾಯವಾಗಿದೆ ಕೂಡಲೇ ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂದು ತಾಪಂ ಸದಸ್ಯ ನರಸಿಂಹ್ಮ ಸಭೆಯ ಗಮನ ಸೆಳೆದರು.

     ಬೆಸ್ಕಾಂ ಎಇಇ ಹರೀಶ್ ಮಾತನಾಡಿ 34 ಗ್ರಾಪಂಗಳಿಂದ 36 ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದೆ ಎಂದು ಸಭೆಗೆ ತಿಳಿಸಿದಾಗ ತಾಪಂ ಸದಸ್ಯರು ಎಲ್ಲರೂ ಪ್ರತಿ ಗ್ರಾಮಗಳಲ್ಲಿ ಬೀದಿದ್ವೀಪಗಳಿಗೆ ಸ್ವೀಚ್ ಆಳವಡಿಸಿ ನಿರ್ವಹಣೆ ಹೊಣೆ ವಾಟರ್‍ಮ್ಯಾನ್‍ಗಳಿಗೆ ನೀಡಬೇಕು ಎಂದಾಗ ಕೇಲವೊಂದು ಗ್ರಾಮಗಳಲ್ಲಿ ಈಗಾಗಲೇ ಅಗತ್ಯಕ್ರಮ ಕೈಗೋಳ್ಳಲಾಗಿದೆ ಎಂದು ಹರೀಶ್‍ರವರು ತಿಳಿಸಿದರು.

     ಸಭೆಯಲ್ಲಿ ತಾಪಂ ಇಒ ನರಸಿಂಹ್ಮಮೂರ್ತಿ ಮಾತನಾಡಿ ತಾಲೂಕಿನಲ್ಲಿ ಸುಮಾರು 50 ಸಾವಿರ ಕುಟುಂಗಳು ನರೇಗ ಉದ್ಯೋಗ ಚೀಟಿ ಪಡೆದಿದ್ದು, ಹೋಸದಾಗಿ 1600 ಕಾರ್ಡ್ ವಿತರಣೆ ಮಾಡಿದ್ದು,ತಾಲೂಕಿನಲ್ಲಿ 1500 ಕುಟುಂಗಳು ನಿವೇಶನ ರಹಿತರಿದ್ದು, ನೀವೇಶನಕ್ಕಾಗಿ 477 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ ಎಂದಾ ಅವರು ಇದುವರೆಗೆ 8668 ಮನೆಗಳು ಮಂಜೂರಾಗಿದ್ದು,10.80 ಕೋಟಿ ವಸತಿ ಹಣ ಬಿಡುಗಡೆ ಆಗಬೇಕಿದೆ ಎಂದು ಸಭೆಗೆ ತಿಳಿಸಿದರು.ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷರಾದ ಐ.ಜೆ.ನಾಗರಾಜು, ಸದಸ್ಯರಾದಪುಟ್ಟಣ್ಣ, ಸಣ್ಣರೆಡ್ಡಿ,ಶಿವಪ್ಪ ,ಹನುಮಂತರಾಯಪ್ಪ,ಶಿವಮ್ಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link