ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಡಿಜಿಟಲ್ ವ್ಯವಸ್ಥೆ ಜಾರಿಯಾಗಬೇಕಿದೆ : ಡಿಸಿಎಂ

ಬೆಂಗಳೂರು

    ರಾಜ್ಯದ ಉನ್ನತ ಶಿಕ್ಷಣ ಕಾಲೇಜುಗಳನ್ನು ಸುಧಾರಣೆ ಮಾಡಿ ಅವುಗಳ ಗುಣಮಟ್ಟ ಹೆಚ್ಚಿಸಲು ಡಿಜಿಟಲ್ ವ್ಯವಸ್ಥೆ ಜಾರಿಯಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ ಅವರು ತಿಳಿಸಿದ್ದಾರೆ.

     ಅರಮನೆ ರಸ್ತೆಯ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಸೋಮವಾರ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಏರ್ಪಡಿಸಿದ್ದ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರಿಣಾಮಕಾರಿ ಆಡಳಿತ ಮತ್ತು ನಾಯಕತ್ವ ಕುರಿತ ಸಂವಾದದಲ್ಲಿ ಮಾತನಾಡಿ ಗುಣಮಟ್ಟ ಹೆಚ್ಚಿಸದ ಹೊರತು ರಾಜ್ಯದ ಉನ್ನತ ಶಿಕ್ಷಣ ಕಾಲೇಜುಗಳ ಸುಧಾರಣೆ ಸಾಧ್ಯವಿಲ್ಲ ಎಂದರು.

    ನಮ್ಮಲ್ಲಿ 69 ವಿಶ್ವವಿದ್ಯಾಲಯಗಳಿವೆ, 299 ಪಾಲಿಟೆಕ್ನಿಕ್, 3898 ಪದವಿ, 685 ಮತ್ತು 234 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅವುಗಳ ಸಾಧಾರಣೆಗೆ ನಾವು ಒತ್ತು ನೀಡಬೇಕಾಗಿದೆ ಜೊತೆಯಲ್ಲಿ ಸರಿಯಾದ ನಾಯಕತ್ವ ಮತ್ತು ಇ-ಆಡಳಿತ ಹೇಗೆ ಜಾರಿಗೊಳಿಸಬೇಕೆಂದು ಚಿಂತನೆ ನಡೆಸಬೇಕಾಗಿದೆ ಎಂದು ತಿಳಿಸಿದರು.

     ಉನ್ನತ ಶಿಕ್ಷಣದೊಳಗೆ ಹೊಸ ವಿಧಾನಗಳು,ಅಭ್ಯಾಸಗಳು, ಸಂವಾದಾತ್ಮಕ ತಂತ್ರಜ್ಞಾನಗಳು, ಸ್ಟ್ರೇಟ್‌ಗಳು ಹೇಗೆ ಮಾಡಬಹುದು.ಕೆಲಸ ಮಾಡುವ ನಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳ ಬೇಕೆಂಬುವುದರ ಬಗ್ಗೆ ನಾವು ಹೊಸ ತಲೆಮಾರಿಗೆ ತರಬೇತಿ ನೀಡಬೇಕೆಂದು ನುಡಿದರು.

    ರಾಜ್ಯ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ,ವಿಶ್ವವಿದ್ಯಾಲಯಗಳು ಜ್ಞಾನ ವೃದ್ಧಿಸುವ ವೇದಿಕೆಗಳು. ಅದರಲ್ಲಿ ಕಾರ್ಯಗಳು ಉತ್ತಮ ಗುಣಮಟ್ಟದಲ್ಲಿ ಸಾಗಬೇಕಾದರೆ ಕುಲಪತಿಗಳು ಸಹದ್ಯೋಗಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರಬೇಕು.ಆಗ ಆಡಳಿತಾತ್ಮಕ ಕೆಲಸಗಳು ಸುಲಲಿತವಾಗಿ ನಡೆಯುತ್ತವೆ ಎಂದು ನುಡಿದರು.

   ದಕ್ಷಿಣ ಭಾರತೀಯ ಬ್ರಿಟಿಷ್ ಕೌನ್ಸಿಲ್ ನಿರ್ದೇಶಕ ಜಾನಕ ಪುಷ್ಪನಾಥನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ಅನೇಕ ಸಹಾಯಧನ ವನ್ನು ನೀಡಲಾಗುತ್ತಿದೆ. ಜೊತೆಗೆ ಪಿಹೆಚ್ ಡಿ ಸಂಶೋಧಕರಿಗೆ ಉನ್ನತ ಮಟ್ಟದ ಸಹಾಯ ಧನಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನಗಳನ್ನು ನೀಡಲಾಗುವುದು ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖಾತ್ರಿ, ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಎ.ಕೋರಿ ಸೇರಿದಂತೆ ಪ್ರಮುಖರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link