ಬೆಂಗಳೂರು
ರೈಲ್ವೆ ಇಲಾಖೆಗೆ ಡಿಜಿಟಲ್ ಭಯೋತ್ಪಾದಕರ ಕಾಟ ಎದುರಾಗಿದೆ ಎನ್ನಲಾಗಿದೆ.ಐಆರ್‌ಸಿಟಿಸಿ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿ ನಕಲಿ ಇ-ಬುಕಿಂಗ್ ಮಾಡಿ ಇಲಾಖೆಗೆ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ . ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ಭಯೋತ್ಪಾದಕ ಸಂಘಟನೆಯ ನಂಟು ಇರುವ ಬಗ್ಗೆ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಐಆರ್‌ಸಿಟಿಸಿ ಖನ್ನ ಹಾಕಿ ಇ-ಟಿಕೆಟ್ ಬುಕಿಂಗ್ ಮಾಡಿ ಇಲಾಖೆಗೆ ನಷ್ಟ ಮಾಡುತ್ತಿದ್ದ ಗುಲಾಮ್ ಮುಸ್ತಫಾ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದು, ಈತನಿಂದ ಲ್ಯಾಪ್ ಟಾಪ್, ಮೊಬೈಲ್ ಸೇರಿ ಇನ್ನೂ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ರಾಜಗೋಪಾಲನಗರದ ಮಸೀದಿ ಒಂದರಿಂದ ಈತ ಈ ಚಟುವಟಿಕೆಗಳನ್ನು ನಡೆಸಿದ್ದನಂತೆ. ಕಳೆದ ಎರಡು ವರ್ಷಗಳಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಬಗ್ಗೆ ಮತ್ತು ಅದರಲ್ಲಿರುವ ಕೊರತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾನೆ.
