ದೆಹಲಿಗೆ ಹಾರಿದ ದಿನೇಶ್ ಗುಂಡೂರಾವ್….!!!

ಬೆಂಗಳೂರು

        ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಲ್ಲವೆ ಪುನರ್ ರಚನೆ ನಡೆಯುವುದು ಖಚಿತವಾಗಿದ್ದು, ಈ ಸಂಬಂಧ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಗೆ ತೆರಳಿದ್ದಾರೆ. 

         ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಹುತೇಕ ನಾಳೆ ದೆಹಲಿಗೆ ತೆರಳುತ್ತಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕಮಾರ್ ಅವರು ಸಹ ದಿಲ್ಲಿಯಾತ್ರೆ ಕೈಗೊಳ್ಳುವ ನಿರೀಕ್ಷೆಯಿದೆ.

        ನಾಡಿದ್ದು ಮಂತ್ರಿಗಳಾಗುವವರ ಪಟ್ಟಿ ಸಿದ್ಧವಾಗುವ ನಿರೀಕ್ಷೆಯಿದೆ. ನಾಳೆಯಿಂದ ಈ ಪ್ರಕ್ರಿಯೆ ಬಿರುಸುಗೊಳ್ಳಲಿದೆ. ಜತೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ದಿಲ್ಲಿಯತ್ತ ದೌಡಾಯಿಸಲಿದ್ದಾರೆ.

          ಸಚಿವ ಸಂಪುಟದಿಂದ ಪಕ್ಷೇತರ ಶಾಸಕ ಆರ್. ಶಂಕರ್, ಡಾ. ಜಯಮಾಲ, ಪಾವಗಡದ ವೆಂಕಟರಮಣಪ್ಪ, ಪುಟ್ಟ ರಂಗ ಶೆಟ್ಟಿ, ಎಂ.ಸಿ. ಮನಗೂಳಿ ಅವರನ್ನು ಕೈಬಿಡುವ ಬಗ್ಗೆ ಚರ್ಚೆ ನೆಡಯುತ್ತಿದೆ.

            ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿರುವುದು ಹಿರಿಯರನ್ನು ಕೆರಳಿಸಿದೆ. ಹೀಗಾಗಿ ಲಾಬಿ ಬಿರುಸುಗೊಳ್ಳುವ ನಿರೀಕ್ಷೆಯಿದೆ.

           ಸಂಪುಟಕ್ಕೆ ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಎಸ್.ಆರ್. ಪಾಟೀಲ್, ಸಿ.ಎಸ್. ಶಿವಳ್ಳಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಎಂ.ಬಿ. ಪಾಟೀಲ್ ಮತ್ತಿತರರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಎಂ.ಬಿ. ಪಾಟೀಲ್ ಮತ್ತಿತರರಿಗೆ ನಿಗಮ ಮತ್ತು ಮಂಡಳಿಗಳ ಸ್ಥಾನ ದೊರೆಯಬಹುದಾಗಿದೆ. 

            ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಜಯಮಾಲ ಹಾಗೂ ಆರ್. ಶಂಕರ್ ಅವರನ್ನು ಮಂತ್ರಿಮಂಡಲದಲ್ಲೇ ಉಳಿಸಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಪ್ರಾತಿನಿಧ್ಯೆ ದೊರಕಿಸಿಕೊಡಲು ಪ್ರಯತ್ನ ನಡೆಸಲಿದ್ದಾರೆ.

          ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಾಲಿಗೆ ಇನ್ನು ಆರು ಸಚಿವ ಸ್ಥಾನಗಳು ಖಾಲಿಯಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ಮಾತ್ರ ದೊಡ್ಡದಿದೆ. ಇದರಿಂದಾಗಿ ಯಾರಿಗೆ ಸ್ಥಾನ ನೀಡಬೇಕು ಎಂಬ ಗೊಂದಲ ಕೂಡ ಕೈ ಪಾಳಯದಲ್ಲಿ ಏರ್ಪಟ್ಟಿದೆ.

          ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈ ಬಿಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಅವರು ಪಕ್ಷದ ವಿರುದ್ಧ ಆಂತರಿಕ ಬಂಡಾಯ ಸಾರಿದ್ದಾರೆ. ಇನ್ನು ಹೊಸಬರು ತಮಗೆ ಮಣೆ ಹಾಕಬೇಕು ಎಂದು ಪಟ್ಟು ಹಿಡಿದಿದ್ದರೆ, ಉತ್ತರ ಕರ್ನಾಟಕಕ್ಕೆ ಭಾಗಕ್ಕೆ ಆಗಿರುವ ಅನ್ಯಾಯ ಸರಿದೂಗಿಸಲು ಈ ಭಾಗದ ಶಾಸಕರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಧ್ವನಿ ಕೇಳಿ ಬಂದಿದೆ. ನಾಳೆ ದೆಹಲಿಯಲ್ಲಿ ರಾಜಕೀಐ ಚಟುವಟಿಕೆ ತೀವ್ರಗೊಳ್ಳಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap