ತುಮಕೂರು:
ಜಿಲ್ಲೆಯ ನಾಗರಿಕರ ಗಮನಕ್ಕೆ, ನಿಮ್ಮೂರಿನಲ್ಲಿ ಅಪರಾಧ ಕೃತ್ಯ ಹೆಚ್ಚಿದೆಯೇ?, ಪುಂಡ ಪೋಕರಿಗಳ ಹಾವಳಿಗೆ ಕಡಿವಾಣವಿಲ್ಲವೇ? , ಠಾಣೆಗಳಲ್ಲಿ ದೂರು ನೀಡಿದರೂ ಕ್ರಮವಾಗುತ್ತಿಲ್ಲವೇ? , ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಯಿಲ್ಲವೇ? , ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯವಾಗುತ್ತಿದೆಯೇ?, ಬೆದರಿಕೆ, ಹಲ್ಲೆಗೆ ಪೊಲೀಸರ ನೆರವು ಬೇಕೇ?, ಎಲ್‍ಎಚ್‍ಎಂಎಸ್ ನಿಗಾ ವ್ಯವಸ್ಥೆಯ ಬಗೆಗೆ ಗೊಂದಲಗಳಿವೆಯೇ? ಇನ್ಯಾವುದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ. ಚಿಂತಿಸಬೇಡಿ.
ಪ್ರಜಾಪ್ರಗತಿ ಹಾಗೂ ಪ್ರಗತಿ ವಾಹಿನಿ ಜಂಟಿಯಾಗಿ ಆ.25 ಮಂಗಳವಾರ ಬೆಳಗ್ಗೆ 11 ರಿಂದ 12ರವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ. ವಂಸಿಕೃಷ್ಣ ಅವರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಜನತೆ ಕರೆ ಮಾಡಿ ಎಸ್ಪಿ ಅವರಿಗೆ ನೇರ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ.
ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 0816-2270004. 2270005.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








