ತಿಪಟೂರು :
ಇಂದು ದೇಶದಾದ್ಯಂತ 70 ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು ಆದರೆ ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಕಛೇರಿಯಾದ ಗಾಂಧಿನಗರದ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವನ್ನು ಆಚರಿಸದೇ ರಾಷ್ಟ್ರಕ್ಕೆ ಅವಮಾನಮಾಡಿದ್ದಾರೆಂದು ಸ್ಥಳಿಯರಾದ ನಯಾಸ್ ತಿಳಿಸಿದರು.
ನಮ್ಮ ಗಾಂಧಿನಗರದಲ್ಲಿ ಹೆಚ್ಚಾಗಿ ಅನಕ್ಷರಸ್ಥರು ಇದ್ದಾರೆ ಅವರಿಗೆ ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ ಆದರೆ ಇಲ್ಲಿನ ಅಧಿಕಾರಿಗಳಿಗೆ ಅನ್ನ ನೀಡುತ್ತಿರುವ ದೇಶದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೇ ಸೌಜನ್ಯಕ್ಕಾದರೂ ಕಛೇರಿಗೆ ಆಗಮಿಸದೆ ರಜೆಯ ಮಜೆಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಇವರ ಮೇಲೆ ಕಠಿಣಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ನಯಾಸ್ ಆಗ್ರಹಿಸಿದ್ದಾರೆ.
ಗಾಂಧಿನಗರದ ಆರೋಗ್ಯ ಕೇಂದ್ರದಲ್ಲಿ ಧ್ವಜಸ್ಥಂಭವಿಲ್ಲ, ನಗರಸಭೆಯರು ನಿರ್ಮಿಸಿಕೊಡುತ್ತೇವೆಂದು ಹೇಳಿದ್ದರು ಇದುವರೆಗೂ ಕಟ್ಟಿಸಿಲ್ಲ ಆದ್ದರಿಂದ ಎಲ್ಲಾ ನೌಕಕರು ಇಲ್ಲಿಯೇ ಗಣರಾಜ್ಯೋತ್ಸವವನ್ನು ಆಚರಿಸಿದೆವು. ಮಂದಿನ ದಿನಗಳಲ್ಲಿ ನಾವೇ ಧ್ವಜಸ್ಥಂಭವನ್ನು ನಿರ್ಮಿಸಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ.ರವಿಕುಮಾರ್ ತಾಲ್ಲೂಕು ವೈದ್ಯಾಧಿಕಾರಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
