ಶಿಗ್ಗಾವಿ :
ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೇಸ್ ಟಿಕೆಟ್‍ಗಳನ್ನ ಆಯಾ ಪಕ್ಷದ ಆಯ್ಕೆ ಸಮೀತಿಯ ಸದಸ್ಯರುಗಳು ಮಾರಾಟ ಮಾಡಿಕೊಂಡಿದ್ದಾರೆ, ಇದು ಎರಡೂ ಪಕ್ಷದ ವರಿಷ್ಟರುಗಳಿಗೆ ತಿಳಿದಿದೆಯೋ ಅಥವಾ ಇಲ್ಲವೋ ತಿಳಿಯದಾಗಿದೆ ಎಂದು ಟಿಕೆಟ್ ವಂಚಿತರಾದ ಅಭ್ಯರ್ಥಿಗಳು ಅಸಮಾದಾನ ತೊಡಿಕೊಳ್ಳುವ ಮೂಲಕ ಬಂಡಾಯವೆದ್ದು ಪಕ್ಷೇತರರಿಗೆ ಜೈ ಎನ್ನುತ್ತಿದ್ದಾರೆ.
ಪಟ್ಟಣದ ಕೆಲವೊಂದು ವಾರ್ಡಗಳಲ್ಲಿ ಕೆಲವು ಅಭ್ಯರ್ಥಿಗಳು ತಮ್ಮ ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ಈಗಾಗಲೇ ಶಾಸಕರು, ಸಂಸದರು, ನಾಯಕರಗಳು ಮತ್ತು ಮುಖಂಡರಗಳು ನಮಗೆ ಟಿಕೇಟ ನೀಡುತ್ತಾರೆ ಎಂಬ ಭರವಸೆಯಲ್ಲಿದ್ದರು ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ನಿರಾಶೆಗೊಂಡು ಕೆಲವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದರೆ ಇನ್ನುಳಿದ ಆಕಾಂಕ್ಷಿಗಳು ಹೊಂದಾಣಿಕೆಯ ಮೂಲಕ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ಮೂಲಕ ಬಂಡಾಯವೆದ್ದಿದ್ದಾರೆ.
ಪಕ್ಷೇತ್ತರ ಪರ್ವ :
ಈಗಾಗಲೇ 1 ನೇ ವಾರ್ಡಿನಿಂದ ಪ್ರಭಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕುರ್ಡೆಕರ ಪಕ್ಷೇತ್ತರರಾಗಿ ನಿಂತು ಇನ್ನುಳಿದ ಆಕಾಂಕ್ಷಿಗಳ ಬೆಂಬಲದೊಂದೊಗೆ ಈಗಾಗಲೇ ವಾರ್ಡಿನ ಜನತೆಯ ನಂಬಿಕೆ ಗಿಟ್ಟಿಸಲು ತಯಾರಿ ನಡೆಸಿದ್ದಾರೆ, 2 ನೇ ವಾರ್ಡಿನಿಂದ ಬಿಜೆಪಿ ಪ್ರಭಲ ಆಕಾಂಕ್ಷಿಯಾಗಿದ್ದ ರೇಖಾ ಸಂಗಣ್ಣ ಕಂಕಣವಾಡ ಅವರು ಉಳಿದ ಆಕಾಂಕ್ಷಿಗಳ ಬೆಂಬಲದೊಂದಿಗೆ ಪಕ್ಷೇತ್ತರ ಅಭ್ಯರ್ಥಿಯಾಗಿದ್ದಾರೆ, 3 ನೇ ವಾರ್ಡಿನಿಂದ ಬಿಜೆಪಿ ಆಕಾಂಕ್ಷಿಯಾಗಿದ್ದ ನಿರ್ಮಲಾ ಧರ್ಮಪ್ಪ ಹೆಡೆಪ್ಪನವರ,
4 ನೇ ವಾರ್ಡಿನಿಂದ ಚನ್ನಪ್ಪ ಯಲಿಗಾರ, ಜಾಫರ್ ಗುಜ್ಜರ್ ನಿಲ್ಲುತ್ತಿದ್ದಾರೆ, 7 ನೇ ವಾರ್ಡಿನಿಂದ ಶರಣಪ್ಪ ಬುಳ್ಳಕ್ಕನವರ, ಅಜ್ಜಣ್ಣ ಹೆಸರೂರ, 9 ನೇ ವಾರ್ಡಿನಿಂದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದರಾಮಗೌಡ ಮೆಳ್ಳೆಗಟ್ಟಿ ಪಕ್ಷೇತ್ತರರಾಗಿದ್ದಾರೆ, 14 ನೇ ವಾರ್ಡಿನಿಂದ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಲೇಮಾನ್ ಬಾದಶಾ ತರ್ಲಘಟ್ಟ ಪಕ್ಷೇತ್ತರರಾಗಿ ಕಣದಲ್ಲಿದ್ದಾರೆ, 20 ನೇ ವಾರ್ಡಿನಿಂದ ಫಕ್ಕೀರೇಶ ಶಿಗ್ಗಾವಿ, 21 ವಾರ್ಡಿನಿಂದ ಉಮೇಶ ಗೌಳಿ, ವಿಜಯ ಬುಳ್ಳಕ್ಕನವರ, ಪ್ರಭು ಕರೇಗೌಡ್ರ ಪಕ್ಷೇತ್ತರವಾಗಿ ನಿಲ್ಲುತ್ತಿದ್ದಾರೆ, 22 ನೇ ವಾರ್ಡಿನಿಂದ ಶಿವಪ್ರಸಾದ ಸುರಗೀಮಠ, ಮಾರುತಿ ರಾಯ್ಕರ್ ಪಕ್ಷೇತ್ತರರಾಗಿ ನಿಲ್ಲಲಿದ್ದಾರೆ, 23 ನೇ ವಾರ್ಡಿನ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಆನಂದ ದಾಸಪ್ಪನವರ ಪಕ್ಷೇತ್ತರ ನಿಂತಿದ್ದಾರೆ.
ಖ್ಯಾರೆ ಎನ್ನದ ವರಿಷ್ಟರು :
ಇನ್ನು ಬಂಡಾಯವೆದ್ದ ಅಭ್ಯರ್ಥಿಗಳನ್ನು ಮತ್ತು ಟಿಕೆಟ್ ವಂಚಿತರನ್ನು ಆಯಾ ಪಕ್ಷದ ವರಿಷ್ಟರು ಇಲ್ಲಿಯವರೆಗೂ ಸಂಪರ್ಕಿಸದೇ ಇರುವುದು ಬಂಡಾಯವೇಳಲು ಇನ್ನಷ್ಟು ಪುಷ್ಟಿ ನೀಡಿದೆ ಎನ್ನಬಹುದು.
ಸಂಧಾನಕ್ಕೂ ಒಪ್ಪದ ಪಕ್ಷೇತ್ತರ ಅಭ್ಯರ್ಥಿಗಳು :
ಈಗಾಗಲೇ ಟಿಕೆಟ್ ವಂಚಿತರಾಗಿ ನಿರಾಶೆಯಲ್ಲಿರುವ ಆಕಾಂಕ್ಷಿಗಳನ್ನು ಟಿಕೇಟ್ ಗಿಟ್ಟಿಸಿದ ಅಭ್ಯರ್ಥಿಗಳು ಸಂಪರ್ಕಿಸಲು ಪ್ರಯತ್ನ ಪಟ್ಟರೂ ಸಾದ್ಯವಾಗುತ್ತಿಲ್ಲ, ನಾವು ಪಕ್ಷೇತ್ತರವಾಗಿ ನಿಂತೆ ನಿಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದರೆ ಸಂಧಾನಕಾರರ ಪ್ರಯತ್ನ ಫಲಕಾರಿಯಾಗದೇ ಹತಾಶೆ ಮನೋಭಾವನೆಯಿಂದ ಇರುವುದು ಬೇರೆ ಪಕ್ಷಕ್ಕೆ ಅದರ ಲಾಭವಾಗುವುದರಲ್ಲಿ ಸಂದೇಹವೇ ಇಲ್ಲ.
ಅನ್ಯ ವಾರ್ಡಿನ ಅಭ್ಯರ್ಥಿಗಳಿಗೆ ಮಣೆ :
ಆಯಾ ವಾರ್ಡಿನಲ್ಲಿ ಆಯಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಗೆಲ್ಲುವ ಅಭ್ಯರ್ಥಿಗಳಿದ್ದರೂ ಸಹಿತ ಬೇರೆ 21 ನೇ ವಾರ್ಡಿನಿಂದ ಬಂದ ರೂಪಾ ಜಗದೀಶ ಬನ್ನಿಕೊಪ್ಪ ಅವರಿಗೆ 1 ನೇ ವಾರ್ಡಿನ ಟಿಕೇಟ್ ನೀಡಿರುವುದು, 2 ನೇ ವಾರ್ಡಿನಿಂದ ಬಂದ ಸುಬಾಸ್ ಚೌಹಾಣ್ ಅವರಿಗೆ 4 ನೇ ವಾರ್ಡಿನ ಟಿಕೆಟ್ ನೀಡಿರುವುದು, 23 ನೇ ವಾರ್ಡಿನಿಂದ ಬಂದ ಪರಶುರಾಮ ಸೊನ್ನದ್ ಅವರಿಗೆ 22 ನೇ ವಾರ್ಡಿನ ಟಿಕೇಟ್ ನೀಡಿ ವರಿಷ್ಟರು ಮಣೆ ಹಾಕಿರುವುದು ನಿಷ್ಟಾವಂತ ಕಾರ್ಯಕರ್ತರಿಗೆ ಅಸಮಾಧಾನ ಬುಗಿದೇಳಲು ಕಾರಣವಾಗಿದೆ.
ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳಲ್ಲಿ ನಿಜವಾದ ಪ್ರಾಮಾಣಿಕ ಕಾರ್ಯಕರ್ತರಿಗೆ ಆಯ್ಕೆ ಕಮೀಟಿಯ ಸದಸ್ಯರು ನಿಜವಾದ ಅಭ್ಯರ್ಥಿಗೆ ಟಿಕೇಟ್ ನೀಡದೆ ಟಿಕೇಟ್ ಮಾರಾಟ ಮಾಡಿಕೊಂಡಿದ್ದಾರೆ ಎಂಬ ವದಂತಿಯಿಂದ ತೀರ್ವ ಬೇಸರ ತಂದಿದ್ದು ಇದನ್ನು ಆಯಾ ಪಕ್ಷದ ವರಿಷ್ಟರು ಯಾವ ರೀತಿ ಪರಿಗಣಿಸಿ ಅನ್ಯಾಯವಾದ ಆಕಾಂಕ್ಷಿಗಳಿಗೆ ತುಂಬಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.