ಉತ್ತರ ಕರ್ನಾಟಕ : ಪ್ರವಾಹದ ಬೆನ್ನಲ್ಲೇ ಸಾಂಕ್ರಾಮಿಕ ರೋಗದ ಭೀತಿ.!

ಬೆಂಗಳೂರು

    ಭಾರೀ ಮಳೆ ಮತ್ತು ಪ್ರವಾಹದಿಂದ ತೀವ್ರ ಬಾಧಿತವಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ನಂತರ ಇದೀಗ ಸಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ನರವಾಗಲು ಹೋಮಿಯೋಕೇರ್ ಇಂಟರ್ ನ್ಯಾಷನಲ್ ನ ನುರಿತ ಹೋಮಿಯೋಪತಿ ವೈದ್ಯಕೀಯ ತಂಡ ಸಮಸ್ಯಾತ್ಮಕ ಪ್ರದೇಶದಲ್ಲಿ ಉಚಿತ ಚಿಕಿತ್ಸೆ ನೀಡಲು ತೆರಳಿದೆ.

    ದೇಶದ ವಿವಿಧ ಭಾಗಗಳ್ಲಿ ವಿಶ್ವದರ್ಜೆಯ ಸೂಪರ್ ಸ್ಪೆಷಾಲಿಟಿ ಹೋಮಿಯೋ ಕೇರ್ ಕ್ಲಿನಿಕ್ಗಳನ್ನು ಸ್ಥಾಪಿಸಿರುವ ಹೋಮಿಯ ಕೇರ್ನ ಪ್ರವಾಹ ಪರಿಹಾರ ಕಾರ್ಯಕ್ರಮಕ್ಕೆ ನಗರದಲ್ಲಿಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಭೈರಸಂದ್ರ ವಾರ್ಡ್ನ ಎನ್. ನಾಗರಾಜು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂತ್ರಸ್ತ ಪ್ರದೇಶದ ಶಾಲಾ ಮಕ್ಕಗಳಿಗೆ ಐದು ಸಾವಿರ ಉಚಿತ ನೋಟ್ ಪುಸ್ತಕಗಳನ್ನು ಸಹ ರವಾನಿಸಲಾಯಿತು.

    ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಹೋಮಿಯೋಕೇರ್ ವೈದ್ಯರು ಸ್ಥಳೀಯ ವೈದ್ಯರನ್ನು ಸಹ ಸೇರಿಸಿಕೊಂಡು ಪರಿಹಾರ ಕಾರ್ಯದಲ್ಲಿ ನಿರತರಾಗಬೇಕು. ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಹೋಮಿಯೋಕೇರ್ ಮುಂದಾಗಿರುವುದು ಉತ್ತಮ ಬೆಳವಣಿಗೆ. ಈಗಾಗಲೇ ತೀವ್ರ ತೊಂದರೆಗೆ ಸಿಲುಕಿರುವವರಿಗೆ ಅಡ್ಡಪರಿಣಾಮ ಬೀರದ ಹೋಮಿಯೋಪತಿ ಚಿಕಿತ್ಸೆ ದೊರೆತರೆ ಅವರ ಬದಕು ಇನ್ನಷ್ಟು ಹಸನಾಗುತ್ತದೆ. ಅಲ್ಲಿನ ಜನರಿಗೆ ಮಾನಸಿಕ ಧೈರ್ಯ ತುಂಬುವ ಜತೆಗೆ ತಮ್ಮ ಕುಟುಂಬ ಮತ್ತು ಪರಿಸರದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಚ್ಚರದಿಂದಿರುವಂತೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆರೋಗ್ಯಪೂರ್ಣ ವ್ಯವಸ್ಥೆಯಿದ್ದರೆ ಯಾವುದೇ ಸಮಸ್ಯೆಗಳಿಂದ ತ್ವರಿತವಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

    ಪಾಲಿಕೆ ಸದಸ್ಯ ಎನ್. ನಾಗರಾಜು ಮಾತನಾಡಿ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಎಲ್ಲಾ ರೀತಿಯ ಸ್ಪಂದನೆ ದೊರೆಯುತ್ತಿದೆ. ಇದೀಗ ಹೋಮಿಯೋಪತಿ ಚಿಕಿತ್ಸೆ ಮತ್ತೊಂದು ಬೆಳವಣಿಗೆಯಾಗಿದೆ. ಅಲ್ಲಿನ ಜನರ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಣಾಮಕಾರಿ ಹೋಮಿಯೋಪತಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು.

     ಹೋಮಿಯೋಕೇರ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ಮಾರ್ಲವಾರ್ ಮಾತನಾಡಿ, ಪ್ರವಾಹ ಸಂತ್ರಸ್ತ ಜನ ಬೇಗ ಸಹಜ ಸ್ಥಿತಿಗೆ ಮರಳುವಂತಾಗಲು ನಿಪುಣ ವೈದ್ಯಕೀಯ ತಂಡವನ್ನು ರವಾನಿಸಲಾಗುತ್ತಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ವೈದ್ಯರು ಸಂಚರಿಸಿ ಚಿಕಿತ್ಸೆ ನೀಡುವ ಜತೆಗೆ ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸಲಿದ್ದಾರೆ. ವಿನೂತನ ಹೋಮಿಯೋಪತಿ ಕಾನ್ಸ್ಟಿಟ್ಯೂಷನಲ್ ವೈದ್ಯಕೀಯ ಪದ್ಧತಿಯಿಂದ ಆಗುವ ಲಾಭಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.

     ಹೋಮಿಯೋಕೇರ್ ಇಂಟರ್ ನ್ಯಾಷನಲ್ ಸಂಸ್ಥೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ಕ್ಕೂ ಹೆಚ್ಚು ಕ್ಲಿನಿಕ್ಗಳನ್ನು ಹೊಂದಿದ್ದು, ಇಲ್ಲಿನ ತಜ್ಞ 300 ಮಂದಿ ವೈದ್ಯಕೀಯ ತಂಡವನ್ನು ಉತ್ತರ ಕರ್ನಾಟಕ ಭಾಗಕ್ಕೆ ರವಾನಿಸಲಾಗುತ್ತಿದೆ. ಮದುಮೇಹ, ಅರ್ಥರಿಟಿಸ್, ಹಾರ್ಮೋನ್ ಅಸಮತೋಲನ, ಚರ್ಮ ರೋಗ, ಅಲರ್ಜಿ, ಆಶ್ತಮಾ ಮತ್ತಿತರ ವಲಯಗಳಲ್ಲಿ ಚಿಕಿತ್ಸೆ ನೀಡುವ ಪರಿಣಿತರು ತಂಡದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap