ಮಣ್ಣು ಹಾಕಿ ಜಿಲ್ಲಾ ಗಡಿ ರಸ್ತೆ ಬಂದ್

ಹುಳಿಯಾರು

     ಕೊರೊನಾ ಸೋಂಕಿತರ ಜಿಲ್ಲಾ ಪ್ರವೇಶ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಸಂಪರ್ಕ ಕಲ್ಪಿಸುವ ವಿವಿಧ ಜಿಲ್ಲೆಗಳ ಗಡಿ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ.ಅಕ್ರಮವಾಗಿ ಜನ ಯಾವುದೇ ತಪಾಸಣೆಗೆ ಒಳಗಾಗದೇ ಕೊಪ್ಪಳ ಜಿಲ್ಲೆಯ ಗಡಿಯನ್ನು ಪ್ರವೇಶಿಸುತ್ತಿದ್ದಾರೆ. ಸಾಕಷ್ಟು ಚೆಕ್ ಪೋಸ್ಟ್ ಗಳಿದ್ದರೂ ಜನ ಕಣ್ತಪ್ಪಿಸಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಇದರಿಂದ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಈಗ ಇದನ್ನು ತಡೆಯಲು ಅನಿವಾರ್ಯವಾಗಿ ಗಡಿ ರಸ್ತೆಗೆ ಮಣ್ಣು ಸುರಿದು ಮುಚ್ಚಲಾಗಿದೆ.

     ಅರಸೀಕೆರೆ ತಾಲೂಕಿನ ಗಡಿ ಸಂಪರ್ಕ ಹೊಂದಿರುವ ಬದ್ಯನಯ್ಕನ ತಾಂಡ್ಯ, ಕೆಂಗಲಾಪುರ ತಾಂಡ್ಯ, ಪುರದಕಟ್ಟೆ, ದವನದಹೊಸಹಳ್ಳಿ, ರಸ್ತೆಗಳು, ಹಿರಿಯೂರು ತಾಲೂಕಿಕೆ ಸಂಪರ್ಕ ಕಲ್ಪಿಸುವ ಮರೆನಡುಪಾಳ್ಯ, ಚಿತ್ರದೇವರಹಟ್ಟಿ, ವಡ್ಡರಹಟ್ಟಿ ಗ್ರಾಮದ ರಸ್ತೆಗಳು, ಹೊಸದುರ್ಗ ತಾಲೂಕಿಗೆ ಸಂಪರ್ಕ ಕಲ್ಪಿಸುವ ನಡುವನಹಳ್ಳಿ, ಮೋಟಿಹಳ್ಳಿ, ಚೋರಗೊಂಡನಹಳ್ಳಿ ಗ್ರಾಮದ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

     ಒಟ್ಟಾರೆ ಹೊರ ಜಿಲ್ಲೆಯ ಸಂಪರ್ಕವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಓಡಾಡಲು ಅನುಕೂಲವಾಗುವಂತೆ ಹೆದ್ದಾರಿಗಳಿಗೆ ಕೇವಲ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ಸಂಪರ್ಕ ಬಹುತೇಕ ಕಡಿತಗೊಂಡಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link