ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ..!

ಬೆಂಗಳೂರು

   ಸರ್ಕಾರ  ಅಧಿಕಾರಕ್ಕೆ ಬಂದು ಇಷ್ಟು ದಿನಗಳ ಬಳಿಕ  ಈಗ ರಾಜ್ಯ ಸರ್ಕಾರ  ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಲಿಸ್ಟ್ ಬಿಡುಗಡೆ ಮಾಡಿದೆ.ಬೆಂಗಳೂರು ನಗರವನ್ನು  ಸ್ವಯಂ ನಿರ್ವಹಣೆ ಮಾಡಲೆಂದು ಮುಖ್ಯಮಂತ್ರಿಗಳೆ ಇಟ್ಟುಕೊಂಡಿದ್ದಾರೆ.ಇನ್ನುಳಿದ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ.

     ಗೋವಿಂದ ಕಾರಜೋಳ- ಬಾಗಲಕೋಟೆ, ಕಲಬುರಗಿ ( ಕಲಬುರಗಿ ಜಿಲ್ಲೆ ಹೆಚ್ಚುವರಿ ಹೊಣೆ):ಡಾ ಅಶ್ವಥ್ ನಾರಾಯಣ್- ರಾಮನಗರ ಹಾಗೂ ಚಿಕ್ಕಬಳ್ಳಾಪುರ ( ಚಿಕ್ಕಬಳ್ಳಾಪುರ ಹೆಚ್ಚುವರಿ ಹೊಣೆ):ಲಕ್ಷ್ಮಣ ಸವಧಿ- ಬಳ್ಳಾರಿ, ಕೊಪ್ಪ ಳ(ಕೊಪ್ಪಳ ಹೆಚ್ಚುವರಿ ಹೊಣೆ):ಆರ್ ಅಶೋಕ್ – ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ: ಜಗದೀಶ್ ಶೆಟ್ಟರ್- ಬೆಳಗಾವಿ , ಹುಬ್ಬಳ್ಳಿ – ಧಾರವಾಡ:ಶ್ರೀರಾಮುಲು- ರಾಯಚೂರು, ಚಿತ್ರದುರ್ಗ:ಸುರೇಶ್ ಕುಮಾರ್ – ಚಾಮರಾಜನಗರ : ವಿ. ಸೋಮಣ್ಣ – ಮೈಸೂರು ,ಮಡಿಕೇರಿ :ಬಸವರಾಜ್ ಬೊಮ್ಮಾಯಿ- ಉಡುಪಿ, ಹಾವೇರಿ : ಹೆಚ್ ನಾಗೇಶ್ – ಕೋಲಾರ : ಪ್ರಭು ಚೌಹಾಣ್- ಬೀದರ್, ಯಾದಗಿರಿ : ಸಿ ಸಿ ಪಾಟೀಲ್-ಗದಗ, ವಿಜಯಪುರ : ಸಿ.ಟಿ ರವಿ-ಚಿಕ್ಕಮಗಳೂರು : ಮಾಧುಸ್ವಾಮಿ-ತುಮಕೂರು, ಹಾಸನ.

    ಸಚಿವ ಅಶೋಕ್ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ನಡುವೆ ಈಗಾಗಲೇ ಬೆಂಗಳೂರು ನಗರ ಉಸ್ತುವಾರಿ ಬೇಕೆಂದು ಪೈಪೋಟಿ ಮಾಡಿದ್ದರು. ಈಗ ಯಾರಿಗೆ ಬೆಂಗಳೂರು ಉಸ್ತುವಾರಿ ಕೊಟ್ಟರೂ ಅಸಮಾಧಾನ ಆಗುತ್ತೆ ಎಂಬ ಕಾರಣಕ್ಕೆ, ಬಿಎಸ್ ಯಡಿಯೂರಪ್ಪ ಅವರು ತಾವೇ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ