ಚಿತ್ರದುರ್ಗ
ಭಾರತದ ಯಾವುದೇ ವ್ಯಕ್ತಿ ರೋಗದಿಂದ ನರಳಿ ಅಥವಾ ಹಸಿವಿನಿಂದ ನರಳಿ ಸಾಯಬಾರದು, ರೋಗ ಮುಕ್ತ, ಹಸಿವುಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಪತಂಜಲಿ ಯೋಗ ಪೀಠದ ಮುಖ್ಯ ಉದ್ದೇಶವಾಗಿದೆ ” ಎಂದು ಯೋಗ ಗುರು ರವಿ ಕೆ.ಅಂಬೇಕರ್ ತಿಳಿಸಿದರು.
ನಗರದ ಬ್ಯಾಂಕ್ ಕಾಲೋನಿಯಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠದ ವತಿಯಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿರುವ ಐದು ದಿನಗಳ ಉಚಿತ ಯೋಗ, ಪ್ರಾಣಾಯಾಮ ತರಬೇತಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಪತಂಜಲಿ ಯೋಗ ಪೀಠದ ಸ್ಥಾಪಕರಾದ ಪೂಜ್ಯ ಬಾಬಾ ರಾಮ್‍ದೇವ್ ರವರು ರೋಗ ಮುಕ್ತ ಭಾರತ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರೀಕರಿಗೆ ಯೋಗ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು 3000 ಪ್ರಶಿಕ್ಷಿತ ಯೋಗ ಶಿಕ್ಷಕರನ್ನು ಹಾಗೂ ಒಂದು ಸಾವಿರಕ್ಕೂ ಅಧಿಕ ಯೋಗ ಪ್ರಚಾರಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿ ನಗರ ಹಾಗೂ ಹಳ್ಳಿಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಸಾರ್ವಜನಿಕರು ಈ ಶಿಬಿರಗಳ ಲಾಭವನ್ನು ಪಡೆದು ಆರೋಗ್ಯವಂತ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೊಡಿಸಬೇಕಾಗಿ ಕರೆ ನೀಡಿದರು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಡಿಡಿಪಿಐ ನಾಗೇಂದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ.ಮಲ್ಲಣ್ಣ, ಪತಂಜಲಿ ಯೋಗ ಪೀಠದ ಯೋಗ ಶಿಕ್ಷಕಿ ಶ್ರೀಮತಿ ಲಲಿತ ಜೆ.ಬೇದ್ರೆ, ಶ್ರೀಮತಿ ಪವಿತ್ರ ,ದಾವಣಗೆರೆ ಪೊಲಿಸ್ ಇಲಾಖೆಯ ಲೋಕೇಶ್ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
