ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ : ಡಿ ಕೆ ಸುರೇಶ್ ಕಿಡಿ

ಬೆಂಗಳೂರು

   ಕೇಂದ್ರದ ನಿರಂತರ ಇಂಧನ ದರ ಏರಿಕೆ ವಿರುದ್ಧ ಸೈಕಲ್‍ಜಾಥಾ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರ ಮೇಲೆ ರಾಜ್ಯ ಬಿಜೆಪಿ ಸರ್ಕಾದ ಕೇಸು ದಾಖಲಿಸಿರುವುದನ್ನು ಸಂಸದ ಡಿ.ಕೆ. ಸುರೇಶ್ ಖಂಡಿಸಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜನರಪರವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ. ಬಿಜೆಪಿಯವರು ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದು ಗಮನಕ್ಕೆ ಬಂದಿದೆ. ಪೆÇಲೀಸರು ಕಾಂಗ್ರೆಸ್ ಮೇಲೆ ಮಾತ್ರ ಕೇಸ್ ದಾಖಲಿಸುತ್ತಾರೆಯೇ ವಿನಃ ನಿಯಮ ಉಲ್ಲಂಘಿಸಿದ
ಬಿಜೆಪಿ ನಾಯಕರ ಮೇಲೆ ಯಾವ ಕ್ರಮವನ್ನೂ ಸಹ ಕೈಗೊಳ್ಳುವುದಿಲ್ಲ ಎಂದರು.

     ಜನಪರ ಹೋರಾಟ ನಡೆಸಿದರೆ ಪ್ರಕರಣ ದಾಖಲಿಸುತ್ತಾರೆ ಎಂದರೆ ಏನರ್ಥ?. ಆದರೂ ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.ಸಾರ್ವಜನಿಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದು ಹೇಗೆ ಅಪರಾಧವಾಗುತ್ತದೆ . ಜನಪರ ಧ್ವನಿಗೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಜನರ ಬಗ್ಗೆ ಕಾಳಜಿ ತೋರದ ಬಿಜೆಪಿಯಲ್ಲಿ ಸಚಿವರು ಪರಸ್ಪರ ಆರೋಪ ಪ್ರತ್ಯಾರೋಪ ದಾಳಿ ನಡೆಸುವುದು, ಮಾಧ್ಯಮಗಳ ಮೂಲಕ ಕಿತ್ತಾಡುವುದೇ ಅವರ ಕೆಲಸವಾಗಿದೆ ಎಂದು ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap