ಬೆಂಗಳೂರು:
ವಿದೇಶದಿಂದ ವಾಪಸ್ಸಾದ ಡಿ ಕೆ ಶಿವಕುಮಾರ್ ಅವರು ಚುನಾವಣೆಯ ಫಲಿತಾಂಶ ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ನನಗೆ ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ. ಎಲ್ಲಿ ಲೋಪವಾಗಿದೆ ಅಂತ ಗೊತ್ತಾಗುತ್ತಿಲ್ಲ.ಈ ವಿಷಯದ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ಸಹೋದರ ಸುರೇಶ್ ಗೆದ್ದ ಬಗ್ಗೆಯೂ ನನಗೆ ಸಂತಸ ಇಲ್ಲ. ಯಾಕೆಂದರೆ ಸುರೇಶ್ ಒಬ್ಬ ಲೋಕಸಭೆಯಲ್ಲಿ ಹೋಗಿ ಏನು ಮಾತನಾಡಲು ಸಾಧ್ಯ? ಖರ್ಗೆ, ದೇವೇಗೌಡರು, ವೀರಪ್ಪ ಮೊಯ್ಲಿ, ಮುನಿಯಪ್ಪನಂತಹವರು ಸೋತಿದ್ದು ನನಗೆ ತೀವ್ರ ಆತಂಕ ತಂದಿದೆ. ಇಂತಹ ಫಲಿತಾಂಶ ರಾಜ್ಯಕ್ಕೆ ಆಗಿರುವುದು ದುರದೃಷ್ಟಕರ ಎಂದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲೂ ಮೈತ್ರಿ ಧರ್ಮ ಪಾಲನೆ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ನಾನು ಬಾಯಿ ಬಿಡದಂತೆ ಮಾಡಿದೆ ,ಯಾರ ವಿರುದ್ಧವೂ ಈಗ ಮಾತನಾಡುವುದಿಲ್ಲ. ಬಿಎಸ್ ಯಡಿಯೂರಪ್ಪನವರ ಕೈಯಲ್ಲೇ ಎಲ್ಲವೂ ಇದೆ ಎಂದು ಪ್ರತಿಕ್ರಿಯೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
