ಬೆಂಗಳೂರು
ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಉಪಚುನಾವಣಾ ಕಣಕ್ಕಿಳಿಸಿದ್ದೇವೆ.ಹೀಗಿದ್ದಾಗ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ನಂಬಲರ್ಹವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕುಮಾರಸ್ವಾಮಿ ಏನು ಬೇಕಾದರೂ ಹೇಳಲಿ.ಬಿಜೆಪಿಯವರು ಕೂಡ ಏನು ಬೇಕಾದರೂ ಹೇಳಲಿ.ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಚಟುವಟಿಕೆ ನಮಗೆ ಬೇಕಾಗಿಲ್ಲ.ನಮ್ಮ ಶಾಸಕಾಂಕ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಏಕೆ ರಾಜೇಶ್ ಗೌಡ ರನ್ನು ಬಿಜೆಪಿ ಕಳುಹಿಸಿ ಕೊಡುತ್ತಾರೆ?ರಾಜೇಶ್ ಗೌಡ ಕಾಂಗ್ರೆಸ್ ಪಕ್ಷದ ಸದಸ್ಯ ಅಲ್ಲ.
ರಾಜೇಶ್ ಗೌಡ ತಂದೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದೆ ಸಂಸದರಾಗಿದ್ದರು.ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪವನ್ನು ತಳ್ಳಿಹಾಕಿ ಸಿದ್ದರಾಮಯ್ಯ ಪರ ವಿಶ್ವಾಸ ನಂಬಿಕೆ ವ್ಯಕ್ತಪಡಿಸಿದರು.
ಶಿರಾದ ಕಾಂಗ್ರೆಸ್ ಅಭ್ಯರ್ಥಿ ಟಿಬಿಜೆ ಅತ್ಯಂತ ತಿಳುವಳಿಕಸ್ಥರು.ಅತ್ಯಂತ ಹಿರಿಯ ವ್ಯಕ್ತಿ, ನಾವೆಲ್ಲರೂ ಒಗ್ಗಟ್ಟಿಂದ ಅವರನ್ನು ಕಣಕ್ಕೆ ಇಳಿಸಿದ್ದೇವೆ.ಪ್ರಜ್ಞಾವಂತ ಬುದ್ಧಿವಂತ ಶಿರಾದ ಜನತೆ ಸೂಕ್ತ ಅಭ್ಯರ್ಥಿ ಯನ್ನೇ ಆಯ್ಕೆ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
